Sunday, January 30, 2011

ಹಕ್ಕ ರಾಯ

ಹಕ್ಕ ರಾಯ ವಿಜಯನಗರ ಸಾಮ್ರಾಜ್ಯದ ಮೊದಲ ದೊರೆಯಾಗಿದ್ದ. ಈತನು ತನ್ನ ತಮ್ಮ ಬುಕ್ಕ ರಾಯನ ಸಂಗಡ ಸೇರಿ ಮುಸ್ಲಿಮರ ದಾಳಿ ಇಂದ ಪತನವಾಗುತ್ತಿದ ಹಿಂದೂ ಸಂಸ್ಕೃತಿ ಹಾಗು ಸಂಪ್ರದಾಯವನ್ನು ಉಳಿಸಲು ಪಣ ತೊಟ್ಟು ಯಶಸ್ವಿಯಾಗಿ ಮುಸ್ಲಿಮರು ದಕ್ಷಿಣ ಬಾರತದ ಕಡೆಗೆ ಬರದಂತೆ ತಡೆದರು. ಹಕ್ಕ ರಾಯ ಮತ್ತು ಬುಕ್ಕ ರಾಯರು ಕುರುಬ ಗೌಡ ಸಮಾಜಕ್ಕೆ ಸೇರಿದವರಗಿರುತ್ತಾರೆ. ಕುರುಬ ಗೌಡರು ಪರಕರ್ಮಿಗಳು ಹಾಗು ದೈರ್ಯವಂತರು, ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗು ಮೊದಲು ಅವರು ಮೌರ್ಯ, ಪಲ್ಲವ , ಹೊಯ್ಸಳ ಸಂರಜಯಗಳನ್ನು ಕಟ್ಟಿ ಆಳಿದವರು. ಹೊಯ್ಸಳರ ಪತನವಾದ ನಂತರ ಕುರುಬರು ಹಲವಾರು ಸಣ್ಣ ಪುಟ್ಟ ರಾಜರಾಗಿ , ಪಾಲೆಗಾರರಾಗಿ, ಸೈನಿಕರಾಗಿ ಇದ್ದವರು. ಹಕ್ಕ ರಾಯನು ವಾರಂಗಲ್ ರಾಜರ ಸೇನಾಧಿಪತಿಯಾಗಿ ಮಲಿಕಫುರ್ ದಂಡೆತ್ತಿ ಬಂದಾಗ ಅವನೊಡನೆ ಯುದ್ದದಲ್ಲಿ ಸೋತು ಸೆರೆಯಾಳಾಗಿ ದೆಹಲಿಗೆ ತನ್ನ ತಮ್ಮನಾದ ಬುಕ್ಕ ರಾಯನ ಜೊತೆಯಲ್ಲಿ ಹೋಗುತ್ತಾರೆ. ಅಲ್ಲಿ ಮುಸ್ಲಿಮರಿಂದ ತಾವು ಕೂಡ ಮುಸ್ಲಿಂ ದರ್ಮಕ್ಕೆ ಮತಾಂತರ ಗೊಂಡರೆ ತಮ್ಮ ಪ್ರಾಣ ಉಳಿಯುವುದಾಗಿ ತಿಳಿಯುತ್ತದೆ. ಅಲ್ಲಿ ಹಿಂದೂಗಳ ಮೇಲೆ ಆಗುತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರಗುತ್ತಾರೆ. ದೆಹಲೀಂದ ತಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಮತ್ತು ಅಪಾರ ಸಂಖ್ಯೆಯಲ್ಲಿದ ತಮ್ಮ ಕುಲ ಬಂದವರಾದ ಕುರುಬ ಗೌಡರನ್ನು ಒಟ್ಟು ಗೂಡಿಸಿ ವಿದ್ಯಾರಣ್ಯ ಎಂಬ ಸಾದುವಿನ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯವನ್ನು ಸ್ತಪನೆ ಮಾಡಿದನು ಹಾಗು ದಕ್ಷಿಣ ಬಾರತದ ಹಿಂದೂ ದೇವಾಲಯಗಳು ಹಾಗು ಹಿಂದೂ ಜನರನ್ನು ಮುಸ್ಲಿಮರ ದಬ್ಬಾಳಿಕೆಯಿಂದ ರಕ್ಷಿಸಿದನು. ಮುಂದೆ ಸಾಮ್ರಾಜ್ಯವು ಬೆಳೆದು ತನ್ನ ವಂಶಸ್ತರಿಂದ ಆಳಲ್ಪಟ್ಟು ವಿಶ್ವ ವಿಕ್ಯತಿ ಪಡೆಯಿತು.

ಆರೆಳ್ಲ

ಆರೆಳ್ಲವೆಂಬುದು ಒಂದು ವಂಶದ ಹೆಸರು. ಆರೆಳ್ಲ ಎಂದರೆ ತೆಲಗುವಿನಲ್ಲಿ ಆರು ಬೆರಳುಗಳನ್ನು ಉಳ್ಳವನು. ಹೇಗೆ ಜನರಿಗೆ ತಮ್ಮ ವಂಶದ ಹೆಅರುಗಳು ಬರುತ್ತವೆ ಎಂಬುದಕ್ಕೆ ಆರೆಳ್ಲ ತುಂಬಾ ಒಳ್ಳೆ ಉದಾಹರಣೆ. ಆರೆಳ್ಲ ವಂಶದ ಪೂರ್ವಿಕರಲ್ಲಿ ಹಲವರಿಗೆ ಕೈಗಳಲ್ಲಿ ಹಾಗು ಕಾಲುಗಳಲ್ಲಿ ಆರು ಬೆರಳುಗಳು ಇರುತ್ತಿಧವಂತೆ ಹಾಗಾಗಿ ಆ ಹಳ್ಳಿಯಾ ಜನ ಇವರನ್ನು ಆರು ಬೆರಳುಗಳವರು ಅಥವಾ ಆರೆಳ್ಲರವರು ಎಂದು ಗುರುತಿಸುತ್ತಿದರಂತೆ. ಕಾಲ ಕ್ರಮೇಣ ಇದು ಈ ವಂಶದವರ ಹೆಸರು ಅಥವಾ ಆಂಗ್ಲದಲ್ಲಿ ಹೇಳುವುದಾದರೆ - ಸರ್ನೆಮ್ ಆಹಿತು. ಆರೆಳ್ಲರ ಪೂರ್ವಜರ ಊರು ಕೋಲಾರದ ಚಿನ್ನದ ಗಣಿಯಾ ಬಳಿ ಇರುವ ಆಂಧ್ರ ಪ್ರದೇಶಕ್ಕೆ ಸೇರಿದ ರಾಮಕುಪ್ಪಂ ಎಂಬ ಊರಿನ ಬಳಿ ಇರುವ ಬಂದಾರಲಪಲ್ಲಿ ಎಂಬ ಚಿಕ್ಕ ಹಳ್ಳಿ.

ಗೌಡ

ಗೌಡ ಎಂಬುದು ಯಾಹುದೇ ಜಾತಿಯ ಹೆಸರಲ್ಲ, ಗೌಡ ಎಂದರೆ ಊರಿಗೆ ದೊಡ್ಡವನು, ಅಥವಾ ಒಂದು ಸಮಾಜಕ್ಕೆ ದೊಡ್ಡವನು, ಅಥವಾ ಒಂದು ಮನೆತನದ ದೊಡ್ಡವನು. ಕರ್ನಾಟಕದ ಎಲ್ಲ ಜಾತಿಯ ಜನರು ತಮ್ಮ ಹಿರಿಯರನ್ನು ಸಂಬೋಧಿಸಲು ಗೌಡ ಎಂಬ ಪದವನ್ನು ಬಳಿಸುತ್ತಾರೆ. ಉದಾಹರೆಣೆಗೆ ಸೋಲಿಗರು ಹಾಗು ಕಾಡು ಕುರುಬರು ತಮ್ಮ ಊರಿನ ಹಿರಿಯನನ್ನು ಗೌಡ ಎಂದರೆ, ತಮ್ಮ ಊರಿನೆ ಪೂಜಾರಿಯನ್ನು ದೇವರಗೌಡ ಅಥವ ದೇವರಗುಡ್ಡ ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಗೌಡ ಎಂಬುದು ಒಂದು ಸಮಾಜದ ಹೆಸರು ಎಂಬ ರೀತಿಯಲ್ಲಿ ಕೆಲವರು ಬಿಂಬಿಸ ತೊಡಗಿದ್ದಾರೆ, ಇದರಲ್ಲಿ ರಾಜಕೀಯ ಪ್ರೇರಣೆಯು ಇದೆ.

ಕೋಲಾರಮ್ಮ

ಕೋಲಾರಮ್ಮ ಕೋಲಾರದ ನಗರ ದೇವತೆ. ಶಿವನ ಪತ್ನಿ ಪಾರ್ವತಿಯ ಇನೋನ್ದು ಶಕ್ತಿ ರೂಪ. ಶಕ್ತಿ ದೇವತೆ ಕೋಲಾರದಲ್ಲಿ ನೆಲಸಿ ಜನರನ್ನು ನೂರಾರು ವರುಷಗಳಿಂದ ಕಾಪಾಡಿಕೊಂಡು ಬಂದ ನಗರದ ದೇವತೆ. ನಾಡ ದೇವತೆ ತಾಯಿ ಚಾಮುಂಡೆಶ್ವರಿಯ ಪ್ರತಿರೂಪ. ನಾಡ ಪ್ರಭುಗಳಾಗಿದ್ದ ಮೈಸೂರಿನ ಅರಸರ ಕುಲ ದೇವತೆ. ಪ್ರತಿ ವರುಷ ತಪ್ಪದೆ ಮೈಸೂರಿನ ಅರಸರು ಕೋಲಾರಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸುವ ಕಾಲವಿತ್ತು, ಆದರೆ ಸ್ವಾತಂತ್ರದ ನಂತರ ಈ ಸಂಪ್ರದಾಯ ಮುಂದುವರಿಯಲಿಲ್ಲ. ಅಂದಿನ ನಾಡ ಪ್ರಭು ಜಯಚಾಮರಾಜೇಂದ್ರ ಒಡೆಯರ್ ರವರು ಕೋಲಾರಕ್ಕೆ ಬರುತಿದುದನ್ನ, ಅವರ ವೈಭವವನ್ನ, ರಾಜ ಗಾಮ್ಬಿರ್ಯವನ್ನು ನನ್ನ ತಾಯಿ ಹಾಗು ಕೋಲಾರದ ಬಿ ಸೀ ಜಯ ಇಂದಿಗೂ ನೆನೆಸಿಕೊಳುತ್ತಾರೆ. ಕೋಲಾರದ ಅದಿದೇವತೆಗೆ ಅಪಾರ ಶಕ್ತಿ ಇದೆ, ಈ ದೇವತೆಯನ್ನು ನೆರವಾಗಿ ನೋಡಬಾರದು ಏಕೆಂದರೆ ಈ ದೇವಿಯ ರೂಪವು ಅತ್ಯಂತ ಬಯಾನಕ ಆಗು ಉಗ್ರ, ದೇವತೆಯ ದರ್ಶನ ಗರ್ಬಗುಡಿಯಲ್ಲಿ ಇರುವ ಕನ್ನಡಿಯಲ್ಲಿ ನೋಡಿ ಪಡಿಯಬೇಕು. ಎಸ್ಟೆ ಉಗ್ರವಾಗಿ ತಾಯಿ ಕಂಡರೂ ಈಕೆ ಅಷ್ಟೇ ಕರುಣಾಮಯಿ. ಈಗಿನ ಕೋಲಾರಮ್ಮ ದೇವಸ್ಥಾನವನ್ನು ಚೋಳರ ಕಾಲದಲ್ಲಿ ಕಟ್ಟಿಸಿದರಾದರು ಅದಕ್ಕೂ ಮೊದಲೇ ಸಾವಿರಾರು ವರ್ಷಗಳಿಂದ ತಾಯಿ ಇಲ್ಲಿ ನೆಲಸಿದ್ದಳೆದು ನಂಬಿಕೆ. ದೇವಸ್ತಾನದ  ಪ್ರವೇಶ ದ್ವಾರದ ಗೋಪುರ ಈಗ ಇಲ್ಲ, ಗೋಪುರವು ಮೊದಲು ಇತ್ತೇ ಅಥವಾ ಗೂಪುರವಿಲ್ಲದೇನೆ ಕಟ್ಟಿಸಿದರೆ ಯಾರಿಗೂ ಗೊತ್ತಿಲ್ಲ. ಈ ದೇವಸ್ತನವು ಸುಮಾರು ೧೦೦೦ವರಷಗಳಷ್ಟು ಹಳೆಯದಾದದ್ದು. ಕೋಲಾರಮ್ಮ ಗರ್ಬಗುಡಿಯ ಪಕ್ಕದಲ್ಲಿಯೇ ಚೇಳಮ್ಮ ನೆಲೆಸಿದ್ದಾಳೆ. ದೇವಸ್ತಾನದ ಎದುರಿನಲ್ಲಿಯೇ ಬ್ರಿಹತ್ ಆದ ಕೋಲಾರಮ್ಮನ ಕೆರೆ ಇದೆ. ಕೆರೆ ಕೋಡಿ ಬಿದ್ದ ವರುಷಗಳಲ್ಲಿ ತಾಯಿಗೆ ವಿಶೇಷ ಪೂಜೆ ಹಾಗು ತೆಪ್ಪೋತ್ಸವ ನಡಿಯುತ್ತದೆ. ದಸರಾ ಹಬದ್ದಂದು ದೇವಿಯ ದರುಶನಕ್ಕೆ ಅಪಾರ ಸಂಕ್ಯೆಯ ಬಕ್ತರು ಬರುತ್ತಾರೆ

Sunday, January 23, 2011

ಜೇನು ಕುರುಬರು

ಜೇನು ಕುರುಬರು ಕರ್ನಾಟಕದಲ್ಲಿ ನೆಲೆಗೊಂಡ ಜನರಲ್ಲಿ ಮೊದಲಿಗರು. ಇವರಿಗೆ ಸಾವಿರಾರು ವರುಷಗಳ ಇತಿಹಾಸವಿದೆ, ಹಾಗು ನೂರಾರು ವರುಷಗಳಿಂದ ಇವರು ಜೀವನ ಸಾಗಿಸುವ ರೀತಿ ಬದಲಾಗದೆ ಹಾಗೆ ಉಳಿದುಕೊಂಡು ಬಂದಿದೆ. ಕರ್ನಾಟಕದ ಇಂದಿನ ನಮಗೆಲ್ಲ ಈ ಜೇನು ಕುರುಬರೆ ಪೂರ್ವಿಕರೆಂದರೆ ಅತ್ಹಿಶೋಕ್ಥಿಯಗಲಾರದು. ಇವರ ಹೆಸರೇ ಹೇಳುವಂತೆ ಕುರುಬ ಎಂದರೆ ಹುಡುಕುವವನು, ಜೇನು ಕುರುಬ ಎಂದರೆ ಜೇನನ್ನು ಹುಡುಕುವವನು. ಇವರು ಕಾಡನ್ನೇ ನಂಬಿ, ಅದರಲ್ಲಿ ಸಿಗುವ ಪಧಾರ್ಥಗಳನ್ನು ಸವಿಸಿ ಬಾಳುವವರು. ಮಾನವನು ಹಳ್ಳಿಗಳಲ್ಲಿ ನೆಲೆಸುವ ಮೊದಲು ಹೇಗೆ ಕಾಡುಗಳಲ್ಲಿ ಆಲಿದು, ಭೇಟೆ ಆಡಿ ಬತುಕುತಿದ್ದನೂ ಆದನ್ನು ಜೇನು ಕುರುಬರು ಇನ್ನು ಮಾಡಿಕೊಡು ಬರುತಿದ್ದಾರೆ ಹಾಗು ನೆಮ್ಮದಿಯ ಬಾಳ್ವೆ ಮಾಡುತಿದ್ದಾರೆ. ಇವರಿಗೆ ಕಾಡನ್ನು ಬಿಟ್ಟು ನಾಡಿಗೆ ಬರಬೇಕು ಎಂಬ ಯೋಚನೆಯೇ ಇಲ್ಲ, ಇಂದಿನ ಕಂಪ್ಯೂಟರ್ ಯುಗದಲ್ಲಿ, ತಮ್ಮ ಬಳಿ ಆಧುನಿಕ ಬದುಕಿಗೆ ಬೇಕಾದ ಯಹುದೇ ವಸ್ತುಗಲಿಲ್ಲದೆ ಮತ್ತು ಅವಕ್ಕೆ ಆಸೆ ಪಡದೆ ಮುಗ್ದ ಜೀವನವನ್ನು ನಡಿಸಿಕೊಂಡು ಬಂದವರು. ಇವರಿಗೆ ಮಲೈ ಮಾದೆಶ್ವರನೆ ಕುಲ ದೇವರು. ಇವರು ಇಂದಿನ ಮೈಸೂರು  ಹಾಗು ಚಾಮರಾಜನಗರ ಜಿಲ್ಲೆಯ ಕಾಡುಗಳಲ್ಲಿ ವಾಸಿಸುತ್ತಾರೆ. ಆದರೆ ಕರ್ನಾಟಕ ಸರ್ಕಾರ ಕಾಡಿನಲ್ಲಿ ವಾಸಿಸುವ ಜನರನ್ನು ನಾಡಿಗೆ ತಂದು ನೆಲಸಿಸುವ ಯೋಜನೆಯಡಿ ತುಂಬ ಜನ ಕಾಡು ಕುರುಬರು, ಸೋಲಿಗರು ಹಾಗು ಜೇನು ಕುರುಬರನ್ನು ತಾವೇ ಸಾವಿರಾರು ವರುಷಗಳಿಂದ ವಾಸಿಸುತಿದ್ದ ಕಾಡುಗಳಿಂದ ವಕ್ಕಲೆಬಿಸುತಿದ್ದಾರೆ. ಜೇನು ಕುರುಬರು ಆನೆಗಳನ್ನು ಪಳಗಿಸುವುದರಲ್ಲಿ ನಿಪುಣರು, ತುಂಬ ಜನ ಜೇನು ಕುರುಬರು ಮಾವುತರಾಗಿ ದಸರಾ ಹಬ್ಬದ ಸಮಯ ಪಲ್ಗೊಳುತ್ತಾರೆ, ಹಾಗು ಕರ್ನಾಟಕ ಅರಣ್ಯ ಇಲಾಕೆಯಲ್ಲಿ ಕಾಡಿನ ರಕ್ಷಣೆಗೆ ಕೆಲಸಕ್ಕೆ ಸೇರಿದ್ದಾರೆ.

Friday, January 21, 2011

ಜುಂಜೆ ಗೌಡ ಎಂಬ ಕುರುಬ ಗೌಡ

ಜುಂಜೆ ಗೌಡನು ಕುರುಬ ಗೌಡ ಸಮಾಜಕ್ಕೆ ಸೇರಿದ ಒಬ್ಬ ಸಹುಕಾರನಾಗಿದ್ದ, ಈತನು ಪ್ರಸಿದ್ದ ಮಲೈ ಮಾದೇಶ್ವರ ದೇವಸ್ಥಾನವನ್ನು ಕಟ್ಟಿದವನು. ಮೊದಲು ಈತನು ಮಾದೇಶ್ವರ ದೇವರೆಂದು ನಂಬಲಿಲ್ಲ, ಆದರೆ ಮಾದೇಶ್ವರ ಸ್ವಾಮಿಯ ಪವಾಡಗಳನ್ನು ತನ್ನ ಕಣ್ಣಾರೆ ಕಂಡ ಮೇಲೆ ಜುಂಜೆ ಗೌಡನಿಗೆ ನಂಬಿಕೆ ಬಂದು ತನ್ನ ಅಪಾರ ಸಂಪತ್ತು ಬಳಿಸಿ ಮಾದೇಶ್ವರ ಗುಡಿಯನ್ನು ಕಟ್ಟಿದನು. ಕಾಲ ಕ್ರಮೇಣ ಇವನು ಕಟ್ಟಿದ ಗುಡಿ ಮಾದೇಶ್ವರನ ಶಕ್ತಿ ಹಾಗು ಪವಾಡಗಳಿಂದ ಪ್ರಸಿದ್ದಿ ಗಳಿಸಿತು. ಜುಂಜೆ ಗೌಡನ ಹೆಸರು ಮಾದೇಶ್ವರ ಸ್ವಾಮಿ ಜೊತೆ ಶಾಶ್ವತವಾಗಿ ಉಳಿಯಿತು.

Thursday, January 20, 2011

ದೇವರಗುಡ್ಡ

ದೇವರಗುಡ್ಡ ಎನ್ನುವವನು ಕುರುಬ ಗೌಡ ಸಮಾಜಕ್ಕೆ ಸೇರಿದವನು, ಇವನು ಮಾದೇಶ್ವರನ ಆರಾಧಕ. ತನ್ನ ಜೀವವನ್ನೇ ದೇವರ ಆರಾಧನೆಗೆ ಮುಡಿಪಾಗಿ ಇಟ್ಟಿರುತಾರೆ. ಕಾಡು ಕುರುಬರು ತಮ್ಮ ಪೂಜಾರಿಯನ್ನು ದೇವರಗುಡ್ಡ ಎಂದು ಕರಿಯುತ್ತಾರೆ. 

ಸೋಲಿಗ

ಸೋಲಿಗರು ಕರ್ನಾಟಕದ ಅತಿ ಪುರಾತನವಾದ ಸಮುದಾಯಗಳಲ್ಲಿ ಒಂದು. ಇವರು ಮೈಸೂರು ಹಾಗು ಚಾಮರಾಜನಗರ ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುತ್ತಾರೆ. ಇವರು, ಕಾಡು ಕುರುಬರು ಹಾಗು ಜೇನು ಕುರುಬರು ಕರ್ನಾಟಕದಲ್ಲಿ ನೆಲಸಿದವರಲ್ಲಿ ಮೊದಲಿಗರು. ಇವರಿಗೆ ಮಲೈ ಮಾದೇಶ್ವರ ಮನೆ ದೇವರಾಗಿರುತ್ತನೆ. ಕಾಡನ್ನೇ ನಂಬಿಕೊಂಡು, ಅದನ್ನೇ ಪೂಜಿಸಿಕೊದು ಬಾಳುತಾರೆ ಸೋಲಿಗರು.

Sunday, January 16, 2011

ಪಲ್ಲವ

ಕುರುಬ ಗೌಡರು ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ ಕಂಚಿಪುರುಂ ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು ಕದಂಬರ ಜೊತೆ ಮತ್ತು ನಂತರ ಚಾಲುಕ್ಯರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಕುರುಬರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ ಕಾಡು ಕುರುಬರು ಮತ್ತು ಜೇನು ಕುರುಬರು ಅಂದು ಕಾಡು ಸೇರಿಕೊಂಡ ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.