Monday, November 29, 2010
ಕಂಸಾಳೆ
ಕಂಸಾಳೆ ಕರ್ನಾಟಕದ ಒಂದು ಸುಪ್ರಸಿದ್ದ ಜನಪದ ಕಲೆ. ಮಲೈ ಮಾದೇಶ್ವರನ ಬಕ್ತರು, ಮಾದೇಶ್ವರ ದೇವರನ್ನು ಆರಾದಿಸುವ ಒಂದು ವಿದಾನ. ಕಂಸಾಳೆಯವರು ಹಾಲುಮತ ಕುರುಬ ಗೌಡ ಜನಾಂಗಕ್ಕೆ ಸೀರಿದವರಗಿರುತ್ತಾರೆ. ಕಂಸಾಳೆಯವರನ್ನು ದೇವರಗುಡ್ಡ ಎಂದು ಕರಿಯುತ್ತಾರೆ. ಇವರು ತಮ್ಮ ಜೀವನವನ್ನೇ ಮಾದೇಶ್ವರನ ಸೇವೆಗಾಗಿ ಮುಡಿಪಾಗಿ ಇಟ್ಟವರು. ಕಂಸಾಳೆಯವರು ಮೊದಲು ತಮ್ಮ ಗುರುಗಳಿಂದ ದೀಕ್ಷೆ ಪಡಿದು ನಂತರ ಕಂಸಾಳೆ ಕಲಿಯುತ್ತಾರೆ. ಕಂಸಾಳೆ ಎಂದರೆ ಅಂದ್ರೆ ಕಂಚಿನ ತಾಳ. ಒಂದು ಕಂಚಿನ ತಾಳವನ್ನು ಎಡಗೈನಲ್ಲಿ ಇಡಿದು ಬಲಗೈನಲ್ಲಿರುವ ಕಂಚಿನ ತಾಳವನ್ನು ಬೀಸಿ ಹಾಡಿ ಕುಣಿಯುವುದೇ ಬೀಸು ಕಂಸಾಳೆ. ಸಾಮಾನ್ಯ ಜನರ ಸಾಂಸ್ಕೃತಿಕ ವೀರನಾದ ಮಾದೇಶ್ವರನ ಅನೇಕ ಬಗೆಯ ಪವಾಡ ಸಾಹಸಗಳು, ಯುಕ್ತಿ, ತಂತ್ರ, ಜಾಣ್ಮೆ, ಕರುಣೆ ಎಲ್ಲವೂ ಈ ಕಾವ್ಯದಲ್ಲಿದೆ. ಜನಪದರು ಮಾದಪ್ಪನನ್ನು ಆರಾಧಿಸುವ, ಪೂಜಿಸುವ, ಹಾಡುವ, ಭಕ್ತಿಯಿಂದ ಕುಣಿಯುವ ಈ ಕಾವ್ಯ ಪ್ರಧಾನವಾಗಿ ಕಥನರೂಪದ್ದು. ಕಾವ್ಯದ ಉದ್ದಕ್ಕೂ ಕತೆಯೇ ಪ್ರಧಾನ. ವೃತ್ತಿಗಾಯಕರು ಈ ಕಾವ್ಯವನ್ನು ಹಾಡುವಾಗ ಮಾತನ್ನೇ ಹಾಡಾಗಿಸುತ್ತಾರೆ. ಹಾಡಿನ ಮೂಲಕ ನಮ್ಮನ್ನು ಕುಣಿಸುತ್ತಾರೆ. ಕುಣಿತದಿಂದ ಭಕ್ತಿಯ ಪರಾಕಾಷ್ಠೆಗೆ ತಂದು ನಿಲ್ಲಿಸುತ್ತಾರ.
ಡೊಳ್ಳು ಕುಣಿತ
ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ದೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಎಂದು ಕುರುಬರು ಬಾವಿಸುತಾರೆ , ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ತರು ಪಾರಂಪರಿಕವಾಗಿ ಈ ನೃತ್ಯವನ್ನು ತಲ ತಲಾಂತರದಿಂದ ಮಾಡಿಕೊಂಡು ಬಂದವರು. ಕರ್ನಾಟಕದಲ್ಲಿ ಯಹುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇದ್ದೆ ಇರುತ್ತದೆ
ಕಾಡು ಕುರುಬ
ತಮ್ಮ ಹೆಸರೇ ಹೇಳುವ ಹಾಗೆ ಕಾಡು ಕುರುಬರೆಂದರೆ ಕಾಡಿನಲ್ಲಿ ವಾಸಿಸುವ ಕುರುಬ ಜನಾಂಗದ ಜನರು. ಇವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುವ ಜನರು . ಇತಿಹಾಸದ ಪ್ರಕಾರ ಈ ಕುರುಬರು ಪಲ್ಲವ ಸಾಮ್ರಾಜ್ಯವನ್ನು ಕಟ್ಟಿ ಆಳಿದವರು, ಪಲ್ಲವ ಸಾಮ್ರಾಜ್ಯದ ಪತನದ ನಂತರ ಅವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡಿಗೆ ಬಂದು ನೆಲಸಿದರೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮಿಳು ಮಿಶ್ರಿತ ಕನ್ನಡದಲ್ಲಿ ಮಾತಾಡುತ್ತಾರೆ. ಇವರ ಕುಲದೈವ ಮಲೈ ಮಾದೇಶ್ವರ. ಇವರು ಕಾಡನ್ನು ಕಾಪಾಡಿಕೊಂಡು ಬಂದವರು.
ಮಾದೇಶ್ವರ
"ಕುರುಬರ ದೇವರು, ಬಡವರ ದೇವರು ಮಾದಪ್ಪ" ಎಂಬುದು ಪ್ರಚಲಿಥದಲಿರುವ ನಾಣ್ನುಡಿ. ಮಾದೇಶ್ವರ ಶಿವನ ಪ್ರತಿ ರೂಪ , ಚಾಮರಾಜನಗರ ಜಿಲ್ಲೆ ಮಾದೇಶ್ವರ ಬೆಟ್ಟದಲ್ಲಿ ನೆಲಸಿರುವ ಈ ದೇವರು, ಅಲ್ಲಿನ ಜನಾರಾದ ಕಾಡು ಕುರುಬರು , ಜೇನು ಕುರುಬರು , ಸೋಲಿಗರು ಹಾಗು ಕುರುಬ ಗೌಡರ ಕುಲದೈವ. ಮಾದೇಶ್ವರ ಸ್ವಾಮಿ ಸುಮಾರು ೬೦೦ ವರುಷಗಳ ಹಿಂದೆ ಬದುಕಿದ್ದರು ಎಂಬ ನಂಬಿಕೆ. ಅವರಿಗೆ ಹುಲಿಯೆ ವಾಹನವಾಗಿತ್ತು, ಅವರು ಮಾದೇಶ್ವರ ಬೆಟ್ಟ ಪ್ರದೇಶದ ಕಾಡಿನಲ್ಲಿ ತಿರುಗಾಡಿ ಪವಾಡಗಳನ್ನು ಮಾಡಿದರೆಂದು ಪ್ರತೀತಿ. ಅವರ ಮಹಿಮೆಯನ್ನು ಕಂಡು ಅಲ್ಲಿನ ಸಾಹುಕಾರನಾದ ಕುರುಬ ಗೌಡ ಜಾತಿಗೆ ಸೇರಿದ ಜುಂಜೆ ಗೌಡ ಎಂಬ ಯಜುಮನ ಮಾದೇಶ್ವರ ದೇವಸ್ತಾನವನ್ನು ಕಟ್ಟಿದನು.
ಕುರುಬ ಗೌಡರು ಇಂದು
ಅನಾದಿ ಕಾಲದಿಂದಲೂ ಹಲವಾರು ಕಸಬುಗಳನ್ನು ಮಾಡಿಕೊoಡಿದ್ದ ಕುರುಬ ಗೌಡರು , ವಿದ್ಯಾಬ್ಯಾಸದ ಕಡೆ ಹೆಚ್ಚು ಗಮನ ಕೊಡಲಿಲ್ಲ. ಪಾಳೆಗಾರರು, ನಾಯಕರು , ಸಾಮ್ರಾಜ್ಯ ಶಾಹಿಗಳು , ಸಾಮಂತ ರಾಜರು, ಸೈನಿಕರು ಆಗಿದ್ದ ಕುರುಬ ಗೌಡರು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕಡೆಗನಿಸಲ್ಪಟ್ಟರು ಮತ್ತು ತುಂಬಾ ಹಿಂದುಳಿದರು , ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿದಾನವಾಹಿತು. ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಹಾಗು ಸಂಗೊಳ್ಳಿ ರಾಯಣ್ಣನಂತ ದೇಶ ಪ್ರೇಮಿಗಳ ಕಾರಣ, ಬ್ರಿಟಿಷರು ಕುರುಬರನ್ನು ರಾಜ್ಯ ಆಡಳಿತದಿಂದ ದೂರವಿಟ್ಟರು, ಉತ್ತರ ಕರ್ನಾಟಕದ ಮುಸಲ್ಮಾನ ದೊರೆಗಳು ತಮ್ಮ ವಿಜಯನಗರದ ದ್ವೇಷದಿಂದ ಕುರುಬರನ್ನು ಹಿಂಸಿಸಿದರು. ಆದರೆ ಭಾರತದ ಸ್ವತಂತ್ರದ ನಂತರ ಅವರಿಗೆ ಸಿಗಬೇಕಾದ ಸೌಲಬ್ಯಗಳು ಸಿಗತೊಡಗಿದವು ಆಗು ಅವರು ವಿದ್ಯಾಬ್ಯಾಸ ಮಾಡಲು ಅನುವುಮಾಡಿಕೊಟ್ಟಿತು. ಬೇರೆ ಸಮುದಾಯಗಳಿಗೆ ಹೋಲಿಸಿದರೆ ಕುರುಬರು ವಿದ್ಯಾಬ್ಯಾಸದಲ್ಲಿ ಮುಂದೆ ಬರುವುದು ತುಸು ನಿದಾನವಾದರು ತುಂಬಾ ಮುನ್ನಡೆದಿದ್ದಾರೆ . ಮತ್ತೆ ಕರ್ನಾಟಕವನ್ನು ಆಳಿ ವಿಜಯನಗರದ ಸುವರ್ಣ ಯುಗಕ್ಕೆ ಕೊಂಡೊಯುವ ಕಲ ಬಂದಿದೆ ಎಂದು ಹಲವರ ಬಾವನೆ.
Sunday, November 28, 2010
ಕುರುಬ ಗೌಡರು ಸಂಪ್ರದಾಯ
ಕುರುಬ ಗೌಡರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿ ಕೊಂಡು ಬಂದವರು, ಕಲ್ಲನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ , ಅದೇ ಸಂಸ್ಕೃತಿ ಬರ ಬರುತ್ತಾ ಶಿವ ಲಿಂಗ ಪೂಜೆಯಾಗಿ ಮಾರ್ಪಟ್ಟಿತು. ಶಿವನ್ನನ್ನು ಬೀರೇಶ್ವರ , ಮೈಲಾರಲಿಂಗ , ಮಾದೇಶ್ವರ , ಮಲ್ಲಪ್ಪ , ಮಲ್ಲಿಕಾರ್ಜುನ ಮುಂತಾದ ಹೆಸರಿನಲ್ಲಿ ಪುಜಿಸುತಾರೆ. ಎಲ್ಲಮ್ಮ , ಭೀಮವ್ವ , ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿ ದೇವಿಯನ್ನು ಪುಜಿಸುತಾರೆ. ಕರ್ನಾಟಕ ಮತ್ತು ಅಂದ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯವಿರುತ್ತೆ , ಈ ದೇವಾಲಯಗಳ ಪೂಜಾರಿಗಳು ಕುರುಬ ಗೌಡರಗಿರುತ್ತಾರೆ.
ಕರ್ನಾಟಕದ ಕುರುಬ ಗೌಡರು
ಕರ್ನಾಟಕದ ೩ನೆ ಅತಿ ದೊಡ್ಡ ಸಮುದಾಯ, ಕುರುಬ ಗೌಡ ಸಮುದಾಯ. ಕರ್ನಾಟಕದ ಪ್ರಮುಖ ಸಾಮ್ರಾಜ್ಯಗಳನ್ನು ಕಟ್ಟಿದವರು ಕುರುಬ ಗೌಡರು. ರಾಷ್ಟ್ರಕೂಟ , ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯ ಪ್ರಮುಖವಾದವು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಿಂದ ದಕ್ಷಿಣ ಭಾರತದಲ್ಲಿ ಹಿಂದೂ ಸಂಸ್ಕೃತಿ ಉಳಿಯುವಂತೆ ಆಯಿತು, ಹಿಂದೂ ಸಂಸ್ಕೃತಿ ಉಳಿಯಲು ಕಾರಣವಾದವರು ಕುರುಬ ಗೌಡ ಸಹೋದರರಾದ ಹಕ್ಕ ರಾಯ ಮತ್ತು ಬುಕ್ಕ ರಾಯ.
Kuruba Gowda's India
ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು. ಮೌರ್ಯರರ ಮೊದಲ ದೊರೆ ಚಂದ್ರಗುಪ್ತನು ಕುರಿಗಾಹಿಯಾಗಿದ್ದು , ಆಗಿನ ನಂದ ದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಆದ ಸಾಮ್ರಾಜ್ಯವನ್ನು ಚಾಣಕ್ಯನ ಸಹಾಯದಿಂದ ಕಟ್ಟಿದನು. ಇದರು ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯಾ ಪಾರ್ಲಿಮೆಂಟ್ ಕಟ್ಟಡದ ೫ನೆ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಎನ್ನು ಸ್ಥಾಪನೆ ಮಾಡಿ , ಅದರ ಕೆಳಗೆ " ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತಿರುವುದು" ಎಂದು ಬರಿಯಲಾಗಿದೆ. ನಂತರ ಕುರುಬ ಗೌಡರು ರಾಷ್ಟ್ರಕೂಟ, ಪಲ್ಲವ, ಹೊಯ್ಸಳ, ದೇವಗಿರಿಯ ಯಾದವ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು.
Prehistoric Kuruba
ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಈಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು
Subscribe to:
Posts (Atom)