ಕುರುಬ ಗೌಡರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿ ಕೊಂಡು ಬಂದವರು, ಕಲ್ಲನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ , ಅದೇ ಸಂಸ್ಕೃತಿ ಬರ ಬರುತ್ತಾ ಶಿವ ಲಿಂಗ ಪೂಜೆಯಾಗಿ ಮಾರ್ಪಟ್ಟಿತು. ಶಿವನ್ನನ್ನು ಬೀರೇಶ್ವರ , ಮೈಲಾರಲಿಂಗ , ಮಾದೇಶ್ವರ , ಮಲ್ಲಪ್ಪ , ಮಲ್ಲಿಕಾರ್ಜುನ ಮುಂತಾದ ಹೆಸರಿನಲ್ಲಿ ಪುಜಿಸುತಾರೆ. ಎಲ್ಲಮ್ಮ , ಭೀಮವ್ವ , ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿ ದೇವಿಯನ್ನು ಪುಜಿಸುತಾರೆ. ಕರ್ನಾಟಕ ಮತ್ತು ಅಂದ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯವಿರುತ್ತೆ , ಈ ದೇವಾಲಯಗಳ ಪೂಜಾರಿಗಳು ಕುರುಬ ಗೌಡರಗಿರುತ್ತಾರೆ.
No comments:
Post a Comment