Monday, November 29, 2010

ಕಂಸಾಳೆ

ಕಂಸಾಳೆ ಕರ್ನಾಟಕದ ಒಂದು ಸುಪ್ರಸಿದ್ದ ಜನಪದ ಕಲೆ.  ಮಲೈ ಮಾದೇಶ್ವರನ ಬಕ್ತರು, ಮಾದೇಶ್ವರ ದೇವರನ್ನು ಆರಾದಿಸುವ ಒಂದು ವಿದಾನ. ಕಂಸಾಳೆಯವರು ಹಾಲುಮತ ಕುರುಬ ಗೌಡ ಜನಾಂಗಕ್ಕೆ ಸೀರಿದವರಗಿರುತ್ತಾರೆ. ಕಂಸಾಳೆಯವರನ್ನು ದೇವರಗುಡ್ಡ ಎಂದು ಕರಿಯುತ್ತಾರೆ. ಇವರು ತಮ್ಮ ಜೀವನವನ್ನೇ ಮಾದೇಶ್ವರನ ಸೇವೆಗಾಗಿ ಮುಡಿಪಾಗಿ ಇಟ್ಟವರು. ಕಂಸಾಳೆಯವರು ಮೊದಲು ತಮ್ಮ ಗುರುಗಳಿಂದ ದೀಕ್ಷೆ ಪಡಿದು ನಂತರ ಕಂಸಾಳೆ ಕಲಿಯುತ್ತಾರೆ. ಕಂಸಾಳೆ ಎಂದರೆ ಅಂದ್ರೆ ಕಂಚಿನ ತಾಳ. ಒಂದು ಕಂಚಿನ ತಾಳವನ್ನು ಎಡಗೈನಲ್ಲಿ ಇಡಿದು ಬಲಗೈನಲ್ಲಿರುವ ಕಂಚಿನ ತಾಳವನ್ನು ಬೀಸಿ ಹಾಡಿ ಕುಣಿಯುವುದೇ ಬೀಸು ಕಂಸಾಳೆ. ಸಾಮಾನ್ಯ ಜನರ ಸಾಂಸ್ಕೃತಿಕ ವೀರನಾದ ಮಾದೇಶ್ವರನ ಅನೇಕ ಬಗೆಯ ಪವಾಡ ಸಾಹಸಗಳು, ಯುಕ್ತಿ, ತಂತ್ರ, ಜಾಣ್ಮೆ, ಕರುಣೆ ಎಲ್ಲವೂ ಈ ಕಾವ್ಯದಲ್ಲಿದೆ. ಜನಪದರು ಮಾದಪ್ಪನನ್ನು ಆರಾಧಿಸುವ, ಪೂಜಿಸುವ, ಹಾಡುವ, ಭಕ್ತಿಯಿಂದ ಕುಣಿಯುವ ಈ ಕಾವ್ಯ ಪ್ರಧಾನವಾಗಿ ಕಥನರೂಪದ್ದು. ಕಾವ್ಯದ ಉದ್ದಕ್ಕೂ ಕತೆಯೇ ಪ್ರಧಾನ. ವೃತ್ತಿಗಾಯಕರು ಈ ಕಾವ್ಯವನ್ನು ಹಾಡುವಾಗ ಮಾತನ್ನೇ ಹಾಡಾಗಿಸುತ್ತಾರೆ. ಹಾಡಿನ ಮೂಲಕ ನಮ್ಮನ್ನು ಕುಣಿಸುತ್ತಾರೆ. ಕುಣಿತದಿಂದ ಭಕ್ತಿಯ ಪರಾಕಾಷ್ಠೆಗೆ ತಂದು ನಿಲ್ಲಿಸುತ್ತಾರ.

No comments:

Post a Comment