ಕುರುಬ ಗೌಡರು ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ ಕಂಚಿಪುರುಂ ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು ಕದಂಬರ ಜೊತೆ ಮತ್ತು ನಂತರ ಚಾಲುಕ್ಯರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಕುರುಬರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ ಕಾಡು ಕುರುಬರು ಮತ್ತು ಜೇನು ಕುರುಬರು ಅಂದು ಕಾಡು ಸೇರಿಕೊಂಡ ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.
No comments:
Post a Comment