Sunday, January 30, 2011

ಹಕ್ಕ ರಾಯ

ಹಕ್ಕ ರಾಯ ವಿಜಯನಗರ ಸಾಮ್ರಾಜ್ಯದ ಮೊದಲ ದೊರೆಯಾಗಿದ್ದ. ಈತನು ತನ್ನ ತಮ್ಮ ಬುಕ್ಕ ರಾಯನ ಸಂಗಡ ಸೇರಿ ಮುಸ್ಲಿಮರ ದಾಳಿ ಇಂದ ಪತನವಾಗುತ್ತಿದ ಹಿಂದೂ ಸಂಸ್ಕೃತಿ ಹಾಗು ಸಂಪ್ರದಾಯವನ್ನು ಉಳಿಸಲು ಪಣ ತೊಟ್ಟು ಯಶಸ್ವಿಯಾಗಿ ಮುಸ್ಲಿಮರು ದಕ್ಷಿಣ ಬಾರತದ ಕಡೆಗೆ ಬರದಂತೆ ತಡೆದರು. ಹಕ್ಕ ರಾಯ ಮತ್ತು ಬುಕ್ಕ ರಾಯರು ಕುರುಬ ಗೌಡ ಸಮಾಜಕ್ಕೆ ಸೇರಿದವರಗಿರುತ್ತಾರೆ. ಕುರುಬ ಗೌಡರು ಪರಕರ್ಮಿಗಳು ಹಾಗು ದೈರ್ಯವಂತರು, ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗು ಮೊದಲು ಅವರು ಮೌರ್ಯ, ಪಲ್ಲವ , ಹೊಯ್ಸಳ ಸಂರಜಯಗಳನ್ನು ಕಟ್ಟಿ ಆಳಿದವರು. ಹೊಯ್ಸಳರ ಪತನವಾದ ನಂತರ ಕುರುಬರು ಹಲವಾರು ಸಣ್ಣ ಪುಟ್ಟ ರಾಜರಾಗಿ , ಪಾಲೆಗಾರರಾಗಿ, ಸೈನಿಕರಾಗಿ ಇದ್ದವರು. ಹಕ್ಕ ರಾಯನು ವಾರಂಗಲ್ ರಾಜರ ಸೇನಾಧಿಪತಿಯಾಗಿ ಮಲಿಕಫುರ್ ದಂಡೆತ್ತಿ ಬಂದಾಗ ಅವನೊಡನೆ ಯುದ್ದದಲ್ಲಿ ಸೋತು ಸೆರೆಯಾಳಾಗಿ ದೆಹಲಿಗೆ ತನ್ನ ತಮ್ಮನಾದ ಬುಕ್ಕ ರಾಯನ ಜೊತೆಯಲ್ಲಿ ಹೋಗುತ್ತಾರೆ. ಅಲ್ಲಿ ಮುಸ್ಲಿಮರಿಂದ ತಾವು ಕೂಡ ಮುಸ್ಲಿಂ ದರ್ಮಕ್ಕೆ ಮತಾಂತರ ಗೊಂಡರೆ ತಮ್ಮ ಪ್ರಾಣ ಉಳಿಯುವುದಾಗಿ ತಿಳಿಯುತ್ತದೆ. ಅಲ್ಲಿ ಹಿಂದೂಗಳ ಮೇಲೆ ಆಗುತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರಗುತ್ತಾರೆ. ದೆಹಲೀಂದ ತಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಮತ್ತು ಅಪಾರ ಸಂಖ್ಯೆಯಲ್ಲಿದ ತಮ್ಮ ಕುಲ ಬಂದವರಾದ ಕುರುಬ ಗೌಡರನ್ನು ಒಟ್ಟು ಗೂಡಿಸಿ ವಿದ್ಯಾರಣ್ಯ ಎಂಬ ಸಾದುವಿನ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯವನ್ನು ಸ್ತಪನೆ ಮಾಡಿದನು ಹಾಗು ದಕ್ಷಿಣ ಬಾರತದ ಹಿಂದೂ ದೇವಾಲಯಗಳು ಹಾಗು ಹಿಂದೂ ಜನರನ್ನು ಮುಸ್ಲಿಮರ ದಬ್ಬಾಳಿಕೆಯಿಂದ ರಕ್ಷಿಸಿದನು. ಮುಂದೆ ಸಾಮ್ರಾಜ್ಯವು ಬೆಳೆದು ತನ್ನ ವಂಶಸ್ತರಿಂದ ಆಳಲ್ಪಟ್ಟು ವಿಶ್ವ ವಿಕ್ಯತಿ ಪಡೆಯಿತು.

No comments:

Post a Comment