Monday, June 27, 2011

ಕುರುಬ ಗೌಡರ ಕಥೆ

ವಿಜಯನಗರ ಕಟ್ಟಿದ ಹಕ್ಕ ಬುಕ್ಕರ
ರಾಜಮಾತೆ ಅಹಿಲ್ಯಬಾಯಿ ಹೊಲ್ಕರ
ಹಿಂದೂಗಳು ವಿನಾಶದ ಅಂಚಿನಿಂದ
ಹೊರ ಬಂದದ್ದು ಈ ವೀರ ಕುರುಬರಿಂದ.

ಮೈಲಾರಲಿಂಗ, ಬೀರ, ಮಹದೇಶ್ವರ 
ನಮ್ಮ ಕುಲ ದೈವ ಎಂದಿಗು ನೀನೆ ಶಿವ
ದೇವರ ಗುಡ್ಡ , ಜೋಗಿ, ಗೊರವಯ್ಯ 
ನಿನ್ನ ಭಕ್ತರು ನಾವು ಕುರುಬ ಗೌಡರಯ್ಯ.

ಕತ್ತಿ ವರಸೆಯ ನೆನೆಸುವ ಕಂಸಾಳೆ
ಡೊಳ್ಳು ಕುಣಿತವ ಮಾಡುವ ವೇಳೆ
ಕುರುಬರು ಬಂದರೆ ದಾರಿ ಬಿಡಿ
ಭಾರತ ದೇಶವೇ ನಮ್ಮ ಗುಡಿ.

ಚಂದ್ರ ಗುಪ್ತ ದೇಶವನಾಳಿದ ಮೊದಲ ದೊರೆ
ಮೌರ್ಯ, ಪಲ್ಲವ, ಹೊಯ್ಸಳರು ನಮ್ಮವರೇ
ಕವಿಗಳ ರಾಜ ಕಾಳಿದಾಸ
ದಾಸರ ಶ್ರೇಷ್ಟ ಕನಕದಾಸ.

ಕರ್ನಾಟಕದ ಸಿಂಹ ಸಂಗೊಳ್ಳಿ ರಾಯಣ್ಣ
ನಮ್ಮ ಸಮಾಜಕ್ಕೆ ಸ್ಪೂರ್ತಿ ಅವರಣ್ಣ
ಸ್ನೇಹಕೆ  ಬಂದರೆ ನಾವು ಬದ್ಧ
ಯುದ್ಧಕೆ ಕರೆದರೆ ನಾವು ಸಿದ್ಧ.

ವಿಕ್ರಂ ಆರೆಳ್ಲ

 

No comments:

Post a Comment