ಕುರುಬ ಜನಾಂಗದ ಸಂಭ್ರಮದ ಕುಂಡೆ ಹಬ್ಬ ಬುಧವಾರ ದಕ್ಷಿಣ ಕೊಡಗಿನಾದ್ಯಂತ ಆರಂಭಗೊಂಡಿತು. ವಿವಿಧ ವೇಷ ತೊಟ್ಟ ಕುರುಬ ಜನಾಂಗದ ಪುರುಷರು, ಸ್ತ್ರೀಯರು ಮಕ್ಕಳು ಕುಂಡೆ ಹಬ್ಬದ ಹಾಡು ಹೇಳುತ್ತಾ, ಕೈ ಸಿಕ್ಕಿದ ವಸ್ತು ಬಡಿಯುತ್ತಾ, ದಾರಿ ಯಲ್ಲಿ ಸಿಕ್ಕಿದವರನ್ನು ಅಡ್ಡಗಟ್ಟಿ ಹಣಬೇಡಿದರು.
ಪಟ್ಟಣದ ಅಂಗಡಿ ಮುಂಗಟ್ಟು ಮುಂದೆ ಸಾಗಿ ಎದುರು ಕಂಡವರಿಗೆಲ್ಲ ಅಶ್ಲೀಲವಾಗಿ ಬೈಯುತ್ತಾ ಅವರಿಂದಲೂ ಹಣ ಕೇಳಿದರು. ಹಣ ಕೊಡದಿದ್ದರೆ ಮುಂದೆ ಸಾಗುತ್ತಲೇ ಇರಲಿಲ್ಲ. ಅವರ ಹಾಡು ಕೇಳಿದ ಜನತೆ ಒಂದೆಡೆ ನಾಚಿ ನೀರಾಗುತಿದ್ದರೆ ಮತ್ತೊಂದೆಡೆ ಒಳಗೊಳಗೆ ಮಜಾ ಅನುಭವಿಸಿ ಹಣ ನೀಡುತ್ತಿದ್ದರು.
ಕುರುಬರು ಹೆಚ್ಚಾಗಿ ವಾಸ ಮಾಡುವ ಕುಟ್ಟ, ಶ್ರೀಮಂಗಲ, ತಿತಿಮತಿ, ನಾಲ್ಕೇರಿ, ದೇವರಪುರ ಮೊದಲಾದ ಭಾಗದ ಜನರು ಮಧ್ಯಾಹ್ನ ದಿಂದಲೇ ವೇಷ ತೊಟ್ಟು ಕುಣಿದು ಕುಪ್ಪಳಿಸುತ್ತಾ ಬೀದಿಗಿಳಿದು ಸಂಭ್ರಮಿಸಿದರು.
ಜೇನುಕುರುಬ ಮಹಿಳೆಯರು ಪುರುಷರಿಗೆ ಸ್ತ್ರೀವೇಷದ ವಸ್ತ್ರಾಲಂ ಕಾರ ಮಾಡಿ ತಮ್ಮ ಗಂಡಂದಿರ ಜತೆ ತಾವು ಕುಣಿಯುತ್ತಿದ್ದರು. ಗುರುವಾರ ದೇವರಪುರದ ಭದ್ರಕಾಳಿ ದೇವ ಸ್ಥಾನದ ಬಳಿ ಕುಂಡೆ ಹಬ್ಬ ವಿಜೃಂಭಣೆಯಿಂದ ಜರುಗಲಿದ್ದು, ಕುರುಬರು ಎಲ್ಲೆಡೆ ಬೇಡಿ ಸಂಗ್ರಹಿಸಿದ ಹಣವನ್ನು ದೇವರಿಗೆ ಅರ್ಪಿಸಿ ಹರಕೆ ತೀರಿಸಲಿದ್ದಾರೆ.ಅತ್ಯಂತ ಸಡಗರದಿಂದ ಕೂಡಿದ ಗಿರಿಜನರ ಈ ಹಬ್ಬ ಗುರುವಾರ ಸಂಜೆ ಮುಕ್ತಾಯ ವಾಗಲಿದೆ.
http://webcache.googleusercontent.com/search?q=cache:Qcnp4KrD820J:220.227.178.12/prajavani/web/include/story.php%3Fnews%3D21273%26section%3D121%26menuid%3D10+%E0%B2%95%E0%B3%81%E0%B2%B0%E0%B3%81%E0%B2%AC%E0%B2%B0%E0%B3%81&cd=61&hl=en&ct=clnk&gl=uk&source=www.google.co.uk

really nice done a good job
ReplyDelete