Monday, May 28, 2012

Saint Kanakadasa's Songs

Adigeyanu madabekanna Ah my brother, I have to do some cooking
Ajnanigala Better to be at odds with the wise
Arigadaru It won't spare anybody
Aru hitavaru Don't be fooled and think 'That man wishes me well'
Aruballaru Hariharadigala Who could ever comprehend
How great Shiva and Vishnu are?
Badukidenu I am saved now I am saved
Bagilanu Kindly open the door
Bandevayya O money-lender we have come
Bhajisi badukelo Listen, people, get a life
Bombeyatavanadiside While Brahma and Shiva
Dasadasara I'm the son of a servant woman
Dasanagabeku sadasjovama Be a servant of Sadashiva
Dhareya bhogavanu Be careful, man
Eke nadugide O lovely lady Mother Earth
Ellaru maduvudu The things people do for their bellies!
Enandu kondare How shall I praise you
Enna kanda halliya hanuma Hey little kid, village Hanuman
Enu illada dinada Life lasts only a couple of days
Huva karuvara Me, I bring grass to the house of my betters
Hyange ni dasanadi How, O animal, did you become a dasa?
Ishtudina I used to think and say 'Vaikuntha is far far away'
Japava madidarenu So what if you say a mantra
Kande na tandatandada I saw the gods assembled
Kattava Even if you go to all sorts of trouble
Kelirai shivasharanaru I'm afraid to say it
Kula kula kulavendu Don't break your clan into warring factions
Kula kula kulavennu People often speak of 'Our community'
Maganinda gatiyunte Can you really get release
Mumana Will intelligent folk lodge
Mutta bandide A precious pearl has come
Nandinda I've come to this earth
Nannavva kalla bide Mama let me use the stone
Narayana emba namada The seed is 'Narayana'
Navu kurubaru nannu We are the Kuruba shepherd folk
Ni vayiyilaga Are you inside illusion
Prachina karmavada Man O man if past acts don't stop
Ramanujare namo namo O Ramanuja, incarnation of Lakshmana
Sadhu sajjana Satyagunakidirunte What could prevail against folks with devotion
Sahaja This statement is true
Saku saku Enough, enough of this serving fellow humans
Satyavantara When you have the fine companionship
Shiva Shiva Shiva enniro O people of the three worlds
Tallanisadiru Wait a minute mind
Tanu ninnadu It's all part of you
Varakavigala The mediocre man should never show off
Varava Bless me to be in your good graces
Vishvalokesha vishvalokesha Lord of all the universe
Yadavaraya brindavanalola O Madusudana!
Yake ninilli pavadiside O Pashchima Ranganatha
Yamadutarinnenu Lord of Lakshmi
Yelli nodidaralli Wherever I Look I see Rama

Thursday, May 24, 2012

Halu Matha Sudugadu Siddha

Sudugadu Siddhas are peculiarly dressed and are aimed at entertaining the rural public in Northern Karnataka. People believe that witchcraft, evil spirits, ghost and goblins won’t do anything if Sudugadu Siddhas wander in the village.

Sudugadu Siddhas perform naked-meditation at graveyards on Full moon Days and New Moon Days for three hours, then return to the village blowing conch and prevent the devil spirits from entering the village. So, Siddhas believe in the wellbeing of the public and seek rice, money, vegetables and other things from them as rewards. Social scientists have found that Sudugadu Siddhas came into existence during 12th century, when Basavanna( 12th century social regormer) was very active in social reforms. Sudugadu Siddhas are also Shiva Sharanas (devotees of Lord Shiva).
When a person called Siddhayya died and was taken to the burial yard, some crooks challenged Basavanna to save Sidhayya’s life. When Basavanna touched his body with Sanjeevini stick Sidhayya recollected his life. Later, Basavanna assigned him the duty of protecting the village from wicked spirits and gave him conch and bell. Since then, his successors are called as Sudugadu Siddhas.

Siddha’s are Kuuba Gowdas (Halu Matha). They are also called as Mailaralinga, who worship Beerappa as their god. They perform some tricks and entertain children and people. Siddhas wear their costumes between 8 am and 4 pm. One can find Siddhas in Bijapur, Belgaum, Bellary and some other northern districts of Karnataka.

Tuesday, May 22, 2012

Kambli Kuruba

Folklore is the unwritten literature of a culture. It is a blend - a blend of culture and civilization evolved into a distinct form for expression.

While rustic overtones and movements are talked of being revived, there are a few forms which may die, unsung. The Dollu Kunita is one such. This is a popular drum dance from Karnataka. The men play on large drums decorated with coloured cloth, slung around their necks, beating on it as they dance. A combination of dance, music and song, Dollu Kunitha has the power to make the heart skip a beat!

H K Bhoodya from Gila Gundi in Shimoga, the troupe leader of the ‘Sri Kannada Janapada Kala Sangha’ says, “we entertain the urban lot with our dance not just to earn a few bucks but to keep our art alive. People hire us to dance at inaugurations and wedding parties.” An agriculturist by profession, this graduate’s hobby has won him laurels among lovers of the artform. He and his men have participated in many events all over India including the Miss World pageant held in Bangalore in 1999. They have also been featured in some Kannada film songs.
This artform is a legacy of the Kambli kuruba tribe of North Karnataka. The performing men are more often addressed as Beeras, devotees of the Beereshwara (Lord Shiva). The mythological story of the genesis of Dollu Kunita talks of how the demon Doleshwara, a staunch devotee of Shiva went into vigorous penance to emerge as the most powerful. This created unrest amongst the celestial people whose only refuge was Lord Vigneshwara. Ganesha devised a plan that saw him dancing away to glory. Hearing the thundering footsteps, Shiva who swells up with joy comes bursting out of the demon’s stomach. To celebrate this return of Shiva, the Gods stretched the pieces of skin on the sides of a drum - the Dollu. The bones of the Rakshasa’s hands made for the sticks.

The lyrics of Dollu Kunitha are more than such grandma tales and draw upon literature with shades of philosophy, moral ethics, history, etc.

The Dollu Kunita is sometimes used by the government for propagation of messages like family planning, illiteracy, health care and so on. While one person beats the drum and narrates stories or information, in the background others play the tala, flute and other instruments.

Lack of research, financial restraints and a total lack of publicity is leading to the slow death of this artform.


http://www.deccanherald.com/deccanherald/dec28/sh6.asp

Sunday, May 20, 2012

Kuruba Event 2 - ಹೋಳಿ ಹಬ್ಬ

ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ಬೀರೇಶ್ವರ ದೇವರನ್ನು ಆರಾಧಿಸುವುದು ಡೊಳ್ಳು ಕುಣಿತ ವಿಶಿಷ್ಟವಾದದ್ದು. ಮೂಲತಃ ಶೈವಾರಾಧಕರಾದ ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿಯುವುದು ಆಕರ್ಷಕ ಜನಪದ ನರ್ತನವಾಗಿದೆ. 12ಮಂದಿಯ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ನಡೆಯುತ್ತದೆ. ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶವಾಗಿದೆ. ಈ ಸಂದರ್ಭದಲ್ಲಿ ಹಾಲುಮಾತಾ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಯಾಗಿದೆ.

Kuruba Event 1 - ಕಪ್ಪತ್ತಗುಡ್ದದ ಕುರುಬರು

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಗಿರುವ ಕಪ್ಪತಗುಡ್ಡ ಗದಗ, ಶಿರಹಟ್ಟಿ, ಮುಂಡರಗಿ ತಾಲ್ಲೂಕಿನಲ್ಲಿ ಹರಡಿಕೊಂಡ ಔಷಧಿ ಸಸ್ಯಗಳ ಆಗರ. ಗದಗ ಜಿಲ್ಲೆಯ ಸುಮಾರು 33 ಸಾವಿರ ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ಕಪ್ಪತ್ತಗುಡ್ಡ,  ಗದುಗಿನ ಬಿಂಕದಕಟ್ಟಿಯಿಂದ ಪ್ರಾರಂಭವಾಗಿ ಮುಂಡರಗಿ ತಾಲ್ಲೂಕಿನ ಸಿಂಗಾಟಲೂರಿನವರೆಗೆ ಹಬ್ಬಿಕೊಂಡಿರುವ ಈ ವನದ ಒಡಲಿನಲ್ಲಿ ನೂರಾರು ಜಾತಿಯ ಔಷಧಿ ಸಸ್ಯಗಳಿವೆ
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಪಟ್ಟಣದ ಬೀದಿಗಳಲ್ಲಿ ಕುರಿಗಳ ಹಿಂಡೇ ಹಿಂಡು. ಸಾವಿರಾರು ಕುರಿಗಳು ಹಿಂಡಾಗಿ ಕಪ್ಪತ್ತಗುಡ್ಡದತ್ತ ಪ್ರಯಾಣ ಬೆಳೆಸುವುದೇ ಪ್ರತಿವರ್ಷದ ವಿಶೇಷ. ಮಳೆಗಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ದೂರದ ಮಹಾರಾಷ್ಟ್ರದ ಗಡಹಿಂಗ್ಲಜ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ಆಗಮಿಸುವ ಕುರಿಗಳು ಮತ್ತು ಕುರುಬರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಮಳೆಗಾಲದಲ್ಲಿ ಕುರಿಗಳನ್ನು ಕಟ್ಟಿಕೊಂಡು ಸಂಚಾರ ಮಾಡುವುದು ಕಷ್ಟದ ಕೆಲಸ. ವಿಶಾಲವಾಗಿರುವ ಕಪ್ಪತ್ತಗಿರಿಯತ್ತ ಸಾಗಿ ಮುಂಗಾರು ಮಳೆಗೆ ಅಲ್ಲಿ ಬೆಳೆದಿರುವ ಹುಲ್ಲು ತಿನ್ನಲು ಬೀಡು ಬಿಡುವರು. ಹುಲ್ಲಿನಲ್ಲಿರುವ ಅತ್ಯಧಿಕ ಪ್ರಮಾಣದ ಖನಿಜಾಂಶ  ಕುರಿಗಳಿಗೆ ಇಷ್ಟದ ಆಹಾರ. ಕಪ್ಪತ್ತಗುಡ್ಡದ ಹುಲ್ಲು ತಿಂದರೆ ಕುರಿಗಳಿಗೆ ಯಾವುದೇ ರೋಗ ಬಾಧಿಸುವುದಿಲ್ಲ ಎಂಬುದು ಅವರ ನಂಬಿಕೆ. ಮಹಾರಾಷ್ಟ್ರದ ಕುರುಬರು ಮಾತ್ರವಲ್ಲ. ಗುಡ್ಡದ ಸುತ್ತಲಿನ  ರೈತರೂ ತಮ್ಮ ಜಾನುವಾರುಗಳಿಗೆ ಪ್ರತಿವರ್ಷ ಇಲ್ಲಿ ಬೆಳೆದಿರುವ ಹುಲ್ಲನ್ನು ತಿನ್ನಿಸುತ್ತಾರೆ. ಆಹಾರದ ಜೊತೆಗೆ ಕುರಿ ಮತ್ತು ಜಾನುವಾರುಗಳು ಸುರಕ್ಷಿತವಾಗಿರುತ್ತವೆ. ಮಳೆಗಾಲ ಮುಗಿಯುತ್ತಿದ್ದಂತೆ ಆಹಾರದ ಬೇಟೆ ಮುಂದೆ ಸಾಗುತ್ತದೆ.

Great Kurubas 2 - ಕರ್ಮಯೋಗಿ ಕುರುಬರ ಶ್ರೀ ಸಿದ್ದರಾಮ

ಸಿದ್ದರಾಮನು ಶ್ರೀಶೈಲದ  ಮಲ್ಲಿಕಾರ್ಜುನ  ರಮಭಕ್ತ ಈ ಶ್ರೀಶೈಲವು  ಒಂದು ಪ್ರಸಿದ್ಧ ಮೈಲಾರಲಿಂಗ ಕ್ಷೇತ್ರವಾಗಿತ್ತು.  ಆದ್ದರಿಂದಲೇ ಮುಂದೆ ಕಲ್ಯಾಣಕ್ಕೆ ಹೋಗಿ  ಲಿಂಗದೀಕ್ಷೆ ಪಡೆದು ವಚನಕಾರನಾದಾಗ ತನ್ನ ಇಷ್ಟ ದೈವವಾದ ಶ್ರೀಶೈಲದ ಮಲ್ಲಿಕಾರ್ಜುನನನ್ನು ಸ್ಮರಿಸಲು ಕಪಿಲಸಿದ್ಧ ಮಲ್ಲಿಕಾರ್ಜುನಾ ಎಂಬ ಅಂಕಿತನಾಮವನ್ನು ಇಟ್ಟುಕೊಳ್ಳುತ್ತಾನೆ ಸಿದ್ಧರಾಮ, ಮಲ್ಲಿಖಾರ್ಜುನನೆಂಬುದು ಕುರುವಮಲ್ಲಯ್ಯ  ಸಂಸ್ಕತೀಕರಣಗೊಂಡ ರೂಪವಾಗಿದೆ.  ಅವನು ಬಾಲಕನಾಗಿದ್ದಾಗಲೇ ಶ್ರೀಶೈಲದ  ಮಲ್ಲಿಕಾರ್ಜುನನ ಕರೆಗೆ ಓಗೊಟ್ಟು  ಮನೆ ತೊರೆದು ಶ್ರೀಶೈಲಕ್ಕೆ ಹೋಗುವನು.  ಅಲೆದಲೆದು ಕಾಲ್ನಡಿಗೆಯಲ್ಲೇ  ನೂರಾರು  ಮೈಲುಗಲ್ಲುಗಳನ್ನು ಶ್ರಮಿಸಿ ಶ್ರೀಶೈಲ  ತಲುಪುವ ಬಾಲಕ ಧೂಳಿಮಾಕಾಳ  ಅಲ್ಲಿ ಮಲ್ಲಿಕಾರ್ಜುನನಿಗೆ ಸೇವೆ  ಸಲ್ಲಿಸುತ್ತಾನೆ. ಅಲ್ಲಿ  ಆತನಿಗೆ ಶಿವ ಸಾಕ್ಷಾತ್ಕಾರ ವಾಗುವುದು.  ಆದ್ದರಿಂದ  ಆತನು  ಸ್ವಯಂ ಸಿದ್ಧರಾಮನೆಂದು ಹೆಸರು ಧರಿಸುತ್ತಾನೆ. ಹೀಗೆ  ಬಾಲಕನಾಗಿದ್ದಾಗಲೇ ಭಗವಂತನನ್ನರಸಿ ಹೋದ  ಮಹಾಭಕ್ತ ಸಿದ್ಧರಾಮ, ಈತ ಮುಂದೆ  ಪುನಃ  ತನ್ನ   ಊರಾದ ಸೊನ್ನಲಿಗೆ  ಬಂದು ಮಲ್ಲಿಕಾರ್ಜುನನ ಆತ್ಮ ಲಿಂಗವನ್ನು ಶ್ರೀಶೈಲದಿಂದ ತಂದು ಅಲ್ಲಿ ಪ್ರತಿಷ್ಠಾಪಿಸಿ  ದೇವಸ್ಥಾನ ಕಟ್ಟಿಸುತ್ತಾನೆ. ಅದು ಇಂದಿನ ಸೊಲ್ಲಾಪೂರ ಪಟ್ಟಣದಲ್ಲಿದೆ. ಹೀಗೆ ಆತನ ಸಮಾಜಮುಖಿ ಬದುಕು  ಯೌವ್ವನದಲ್ಲೇ ಪ್ರಾರಂಭವಾಗುತ್ತದೆ. ಸಿದ್ಧರಾಮ ಸೊಲ್ಲಾಪುರದಲ್ಲಿ  ಕೆರೆಯನ್ನು ಕಟ್ಟಿಸಿ, ಛತ್ರಗಳನ್ನು ಕಟ್ಟಿಸಿ, ಅನ್ನದಾನ  ಮಾಡುತ್ತಾ  ಜನರ  ಕಂದಾಚಾರ ಮೌಡ್ಯಗಳನ್ನು ಪರಿಹರಿಸುತ್ತಾ ಅವರನ್ನು ಉದ್ದರಿಸಲು   ಪ್ರಯತ್ನಿಸಿರುವುದು ಕಂಡು  ಬರುತ್ತದೆ.  ನಿರ್ಗತಿಕರಿಗಾಗಿ  ಸಾವಿರ  ಮದುವೆಗಳನ್ನು  ಮಾಡುತ್ತಾನೆ. ಸಾಲಗಾರರ (ಜನರು ಇತರರಲ್ಲಿ  ಸಾಲ ಮಾಡಿದ್ದು ಸಾಲವನ್ನು  ತೀರಿಸುವ  ಕೆಲಸವನ್ನು  ಮಾಡುತ್ತಾನೆ. ಸಮಾಜ  ಸುಧಾರಣೆಯ  ಅವನ  ಕೆಲಸಗಳು ಅವಿಸ್ಮರಣೀಯ ಕರ್ಮಯೋಗಿ  ಎಂಬ ಬಿರುದು ಅವನಿಗೆ  ಸಲ್ಲುತ್ತದೆ. ಶೈವಭಕ್ತಿಯ  ಜೊತೆ ಜೊತೆಗೇ ಜನಹಿತಾಸಕ್ತಿ ಅವನ ಬದುಕಿನ ಎರಡು ಕಣ್ಣುಗಳಾಗಿದ್ದವು. ಅವನಿಗೆ ಮೂರು ಕಣ್ಣುಗಳಿದ್ದವೆಂದು ಪ್ರತೀತಿ. ಇವನು ಯೋಗಶಕ್ತಿ  ಪವಾಡ ಶಕ್ತಿಗಳಿಂದ  ಇಡೀ ಜನ ಸಮೂಹದ ಆರಾಧ್ಯ  ದೈವವಾಗಿದ್ದನು. ಆದ್ದರಿಂದಲೇ ಬಿಜ್ಜಳ ಸತ್ತು ಅವನ ಮಗನಾದ  ಸೋವಿದೇವನಿಗೆ  (ಇಮ್ಮಡಿ ಬಿಜ್ಜಳ) ಒಟ್ಟಾಭಿಷೇಕ ನಡೆಸಲು ಪ್ರಯತ್ನಗಳು ಸಾಗುತ್ತಿದ್ದಾಗ  ಬಿಜ್ಜಳನ  ಸೋದರನಾದ ಕರ್ಣದೇವ ತಾನು ಅಧಿಕಾರಕ್ಕೇರಲು  ಪ್ರಯತ್ನಿಸುತ್ತಾ ಕಳಿಸುತ್ತಾನೆ. ಆದರೆ ಸಿದ್ಧ ರಾಮನನ್ನು ಅದನ್ನು ನಿರಾಕರಿಸಿ  ತನ್ನ ಎಂದಿನ ಸಮಾಜೋದ್ದಾರದ ಕೆಲಸ ಕಾರ್ಯಗಳಲ್ಲಿ ಮಗ್ನನಾಗುತ್ತಾನೆ. ಹೀಗೆ  ಸಿದ್ಧರಾಮನು ಯೌವ್ವನದಲ್ಲೇ ಸೊಲ್ಲಾಪುರ ಮತ್ತು  ಕಲ್ಯಾಣ ಭಾಗದಲ್ಲೆಲ್ಲಾ ಪ್ರಸಿದ್ಧನಾಗಿದ್ದನು.
ಇಮ್ಮಡಿ  ಬಿಜ್ಜಳನ ಸಾವಿನ ನಂತರ  ರೇವಣ ಸಿದ್ದೇಶ್ವರರು  ಮಂಗಳವಾಡ ವನ್ನು ತೊರೆದು ದಕ್ಷಿಣ ಭಾರತದತ್ತ ವಿಶೇಷವಾಗಿ ದಕ್ಷಿಣ  ಕರ್ನಾಟಕದತ್ತ ಲೋಕ  ಸಂಚಾರವನ್ನಾರಂಭಿಸುತ್ತಾರೆ. ಆಗ ಅವರ ಜತೆಗೆ  ರೇವಣ  ಸಿದ್ದೇಶ್ವರರ  ಪುತ್ರ ರುದ್ರಮುನಿ  ಮತ್ತು ಸಿದ್ದರಾಮ  ಹಾಗೂ  ಮರಳಸಿದ್ದ ಎಂಬುವವರಿದ್ದರು. ಸಿದ್ಧರಾಮನು ಬದುಕಿದ್ದಾಗಲೇ  ದೇವತ್ವಕ್ಕೇರಿದ ಮಹಾಮಾನವ, ಸಿದ್ಧರಾಮನ ಲಿಂಗ ಶಿವಗಂಗೆ  ಬೆಟ್ಟದಲ್ಲಿ, ರೇವಣ ಸಿದ್ದೇಶ್ವರ  ಬೆಟ್ಟದಲ್ಲಿ ಈಗಲೂ  ಇರುವುದನ್ನು  ಕಾಣಬಹುದು.  ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಈಗಲೂ ಸಿದ್ದರಾಮನ  ಹೆಸರಿನ ಊರುಗಳು, ದೇವಸ್ಥಾನಗಳು ಅಪಾರವಾಗಿರುವುದನ್ನು ಗಮನಿಸಿದರೆ ಅವನು ಈ ಪ್ರದೇಶದಲ್ಲಿ ಬಹಳ ಕಾಲ ಸುತ್ತಾಡಿರಬೇಕು ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ  ತುಮಕೂರು  ಜಿಲ್ಲೆಯಲ್ಲಿ       ಸಿದ್ಧರಾಮನ  ದೇವಸ್ಥಾನಗಳು  ಯಥೇಚ್ಛವಾಗಿದ್ದು, ಅವುಗಳ  ಪೂಜಾರಿಗಳು  ಕುರುಬರೇ  ಆಗಿರುವುದು ಕಂಡು  ಬರುತ್ತದೆ.  ಚಿಕ್ಕಮಗಳೂರು  ಜಿಲ್ಲೆಯ  ತರೀಕೆರೆ   ತಾಲೂಕು  ಅಜ್ಜಂಪುರದ  ಬಳಿಯ  ಸೊಲ್ಲಾಪುತದಲ್ಲಿ  ಹನ್ನೆರಡು ವರುಷಕ್ಕೊಮ್ಮೆ  ಜರುಗುವ ಜಾತ್ರೆಯಲ್ಲಿ  ಅದರ ವಿವಿಧ  ಆಚರಣೆಗಳಲಿ  ಕುರುಬರೇ ಭಾಗವಹಿಸಯತ್ತಾರೆಂದು ತಿಳಿದು ಬರುತ್ತದೆ.
ಅಂದರೆ ಕರ್ಮಯೋಗಿ  ಸಿದ್ಧರಾಮನು ಕಲ್ಯಾಣಕ್ಕೆ ಬಂದು  ಬಸವಣ್ಣ  ಚೆನ್ನಬಸವಣ್ಣ  ಅಲ್ಲಮಪ್ರಭು ಅವರ ಕಲ್ಪನಾಶಕ್ತಿ ಮತ್ತು  ಶಾಸ್ತ್ತ್ರವೇದ ಜ್ಞಾನ  ಮತ್ತು ಅಲೌಕಿಕಶಕ್ತಿಗಳಿಂದ ಮಹಾ ಶಿವಯೋಗಿ  ಎಂದು ಹೆಸರು ಪಡೆದನು ಆ ನಂತರ  ಅವನು  ವಿವಿಧೆಡೆಗಳಲ್ಲಿ  ಶಿವ ತತ್ವ  ಪ್ರಚಾರದಲ್ಲಿ ತೊಡಗಿ ದ್ದಾನೆ.  ಸಿದ್ಧ ರಾಮನು  ತನ್ನ ರಾಜರ್ಷಿ   ಮತ್ತು  ಬ್ರಹ್ಮರ್ಷಿ  ಗುಣ  ಸಾಮ ರ್ಥ್ಯಗಳಿಂದ  ಅತ್ಯಂತ ಜನಪ್ರಿಯನಾದ್ದರಿಂದ  ಅವನನ್ನು  ಜನರು  ಮಹಾದೇವನ  ಅವತಾರ ವೆಂದೇ ಪೂಜಿಸ ತೊಡಗಿದ್ದರು. ಸಿದ್ಧರಾಮ ನ ಸಾಧನೆ ಮತ್ತು ಸಂದೇಶ  ಕುರಿತು ವಿದ್ವಾಂಸ ವಿ. ಆರ್.  ಹನುಮಂತ ಯ್ಯನವರು ಕೆಳಕಂಡಂತೆ ಬರೆಯತ್ತಾರೆ.
ಸಿದ್ಧರಾಮ ಎಷ್ಟು ಪ್ರಭಾವಶಾಲಿ ಗೌರವಶಾಲಿ ವ್ಯಕ್ತಿತ್ವ  ಹೊಂದಿದ್ದನೆಂದರೆ ದೇವಗಿರಿ ಐಆದವರ ಶಾಸನದಲ್ಲಿ ಸಿದ್ಧರಾಮನ ಎರಡು ವಚನಗಳು ಕೆತ್ತನೆಗೊಂಡಿದೆ. ಅವನು ತಾನು ಕಟ್ಟಿಸಿದ  ಕೆರೆಯ ಅಂಗಳದಲ್ಲೇ  ಸಮಾಧಿಗೊಳ್ಳುವ ಮೊದಲು ಹಾವಿನಹಾಳ ಕಲ್ಲಯ್ಯ ಮೊದಲಾದ ಶಿಷ್ಯರಿಗೆ  ಈ ಕ್ಷೇತ್ರದ ಆಚರಣೆಗಳನ್ನು ಎಂದೂ ತಪ್ಪಿಸಬಾರದೆಂದೂ ಕುರುಬರ  ಕುಲದೆರೆಉಎಯಿಂದ ನಡೆಸಿಕೊಂಡು ಹೋಗಬೇಕೆಂದು  ಹೇಳಿ ಶಿವೈಕ್ಯರಾದರೆಂದು ತಿಳಿದು ಬರುತ್ತದೆ. ಹುಲಜಂತಿಯ ಮಹಾಲಿಂಗರಾಯರ ಮೊಮ್ಮಗನಾದ ಬರಹಗಾಲ ಸಿದ್ದನು ಸಿದ್ಧರಾಮನನ್ನು  ಕಂಡು ಕೆರೆಯಲ್ಲಿ  ಜಲದ  ಕಣ್ಣು  ( ನೀರಿನ ಸೆಲೆ) ಇರುವ ಮಹಿಮಾಪುರುಷ ಸೂಚಿಸಿದನೆಂದು  ಸಂತೋಷಗೊಂಡು  ಅವನ ಸ್ಮರಣಾಐರ್ವಾಗಿ ವರುಷಕ್ಕೊಮ್ಮೆ ಅಲ್ಲಿ  ಜಾತ್ರೆಯ ಕಾಲದಲ್ಲಿ  ಸಾಧು  ಸತ್ಪುರುಷರಿಗೆ  ಸಾವಿರ ಕೌಪೀನ ಕಂಬಳಿಗಳನ್ನು ದಾನ ಮಾಡುವ  ಪದ್ದತಿಯನ್ನು ಜಾರಿಗೆ ತಂದನೆಂದು ತಿಳಿದು ಬರುತ್ತದೆ.
ಜಲಶಾಸ್ತ್ತ್ರಜ್ಞಾನ ಸಾಮಾಜಿಕ ಅಭಿವೃದ್ದಿ ಕಾರ್ಯಗಳ  ಪರಿಕಲ್ಪನೆ  ಎಲ್ಲವೂ ಕೃಷಿಕ ಮೂಲದ ನಾಯಕತ್ವ  ಗುಣಗಳುಳ್ಳ  ವ್ಯಕ್ತಿಗೆ ಮಾತ್ರವೇ  ಸಾಧ್ಯ  ಕುಲದೇರಿಗೆ ಎಂದರೆ ಕುಲಸ್ಥರ ಮೇಲೆ ಆಯಾಮ ಕುಲದ ಯಜಮಾನರು ವಿಧಿಸುವ ತೆರಿಗೆ  ಇದು ಕುರುಬ  ಜನಾಂಗದಲ್ಲಿಮಾತ್ರವೇ  ಅಸ್ತಿತ್ವದಲ್ಲಿದೆ.  ಒಕ್ಕಲಿಗರಲ್ಲಿ ಕುಲ  ಪರಿಕಲ್ಪನೆಯೇ  ಇಲ್ಲ. ಆದ್ದರಿಂದ  ಸಿದ್ದರಾಮನು  ಕುಡು  ಒಕ್ಕಲಿಗನಲ್ಲ ಬದಲಾಗಿ  ಒಕ್ಕಲುತನವಿದ್ದ ಅಂದರೆ ಕೃಷಿ ಭೂಮಿಯಿದ್ದ ಸಿದ್ದಪಂಗಡಕ್ಕೆ ಸೇರಿದ  ಕುರುಬ  ಜನಾಂಗದವನು  ಎನ್ನುವುದು ಸ್ಪಷ್ಟವಾಗುತ್ತದೆ.
ಒಮ್ಮೆ ಕಲ್ಯಾಣ  ಪಟ್ಟಣದಲ್ಲಿ ದೇವಸ್ಥಾನದ  ಹಾಲಗರವಿಯಲ್ಲಿ  ಕುರುಬರು  ಮಾಂಸ ತಂದು ಮಾರುವುದರಿಂದ ಅಲ್ಲೆಲ್ಲಾ ಆಶುದ್ದಿಯಾಗುತ್ತದೆ. ಎಂದು ಉಳಿದ ಸಕಲ 18 ಜಾತಿಯವರು ದೊರೆ ಬಿಜ್ಜಳನಿಗೆ  ದೂರು ಕೊಡುತ್ತಾರೆ. ಆಗ ಅವರೆಲ್ಲರನ್ನೂ ಖುಷಿಮಡಿಸಲು ಕುರುಬರು ಕಲ್ಯಾಣ  ಪಟ್ಟಣವನ್ನು ಪ್ರವೇಶಿಸಕೂಡದೆಂದು ಬಿಜ್ಜಳ ಪ್ರತಿಬಂಧಕಾಜ್ಞೆ (ಬಹಿಷ್ಕಾರ) ವಿಧಿಸುತ್ತಾನೆ. ಈ ಸಮಸ್ಯೆಯಿಂದ ಧೃತಿಗೆಟ್ಟ ಮುಗ್ಧ ಕುರುಬರು  ಸಿದ್ಧರಾಮನ  ಸಿದ್ದೇಶ್ವರ  ಮತ್ತು ಅಲ್ಲಮ ಪ್ರಭು  ನ್ಯಾಯಬಿಡಿಸಲು ಕಲ್ಯಾಣಕ್ಕೆ  ಸಮೀಪವಿದ್ದ ಸರೂರಿನ ತೂಗುಡ್ಡಕ್ಕೆ  ಬರುವಂತೆ  ಮಾಡುತ್ತಾನೆ.  ಹೀಗೆ ಕಲ್ಯಾಣಕ್ಕೆ ಮಹಾಶೈವತ್ರಯರಿಗೆ ಸಿದ್ಧರಾಮ, ರೇವಣ ಸಿದ್ಧ ಮತ್ತು ಅಲ್ಲಮ  ಪ್ರಭುವಿಗೆ  ಬಸವಣ್ಣನವರು ಗಣಾರಾಧನೆ ಮಾಡಿಸಿ ಗೌರವ ಸೂಚಿಸುವರು.
ಮುಂದೆ ಈ ವಿಷಯ  ಬಹಿರಂಗವಾಗಿ ಚರ್ಚೆಯಾಗಿ ಕೊನೆಗೆ ಕುರುಬರ  ಸಚ್ಚಾರಿತ್ರ ಮತ್ತು ಶೀಲವಂತಿಕೆಗೆ ಮೆಚ್ಚಿ  ಏವನ ಸಿದ್ದೇಶ್ವರ   ತಪಃಶಕ್ತಿಗೆ  ಬೆಚ್ಚಿ  ಬಿಜ್ಜಳನು ಕುರುವ  ಜನಾಂಗದ  ಮೇಲೆ ವಿಧಿಸಿದ್ದ ಬಹುಷ್ಕಾರವನ್ನು  ರದ್ದು  ಪಡಿಸಿದನೆಂದೂ  ತಿಳಿದು ಬರುತ್ತದೆ.  ಇಂದಿಗೂ  ಶಿವರಾತ್ರಿಯಂದು  ಸೊಲ್ಲಾಪುರದ ಸಿದ್ದರಾಮನ ದೇವಸ್ಥಾನದಲ್ಲಿ  ಜರುಗುವ  ಜಾತ್ರೆಯ ಸಂದರ್ಭದಲ್ಲಿ ಕುರುಬರ (ಧನಗಾರರು) ಹಬ್ಬು ಎಂಬ ವ್ಯಕ್ತಿ ತಲೆಯ ಮೇಲೆ  ಗೊಂಗಡಿ (ಕಂಬಳಿ)  ಹಾಕಿಕೊಂಡು ಪೂಜಾಕಾರ್ಯಕ್ಕೆ ನಾಂದಿ  ಹಾಡುತ್ತಾನೆ ಎಂದು  ತಿಳಿದು  ಬರುತ್ತದೆ.  ಆದರೆ ಇತ್ತೀಚೆಗೆ   ಬಣಜಿಗ ಲಿಂಗಾಯಿತರು ಆ ಮನೆತನದ  ಜೊತೆ  ವೈವಾಹಿಕ ಸಂಬಂಧ ಬೆಳೆಸಿದ್ದಾರೆ. ಎಂದು  ಪ್ರತೀತಿ ಎಂಬುದಾಗಿ  ವಿ. ಆರ್. ಹನಯಮಂತಯ್ಯ ತಮ್ಮ ಕುರುಬರ  ಚರಿತ್ರೆ  ಗ್ರಂಥದಲ್ಲಿ ಬರೆದಿದ್ದಾರೆ.
ಸುಡ್ಡಳ  ಚಾಚರಸನೆಂಬ  ವಚನಕಾರನು  ಸಿದ್ಧರಾಮನ ಬಗೆಗೆ ಹೀಗೆ  ಹೇಳಿದ್ದಾನೆ.
ಉಂಡುಂಡು  ಜರೆವವನು ಯೋಗಿಯೇ
     ಆತನಕ್ಕಳುವವನು ಯೋಗಿಯೇ
     ವ್ಯಸನಕ್ಕೆ  ಮರುಗುವವನು ಯೋಗಿಯೇ
     ಆದಿವ್ಯಾಧಿಯುಳ್ಳವ ಯೋಗಿಯೆ
  ಯೋಗಿಗಳೆಂದರೆ ಮೂಗನಾಗಳ ಕೊಯ್ದೆ
     ಯೋಗಿಗಳೆಂದರೆ  ಮೂಗನಾಗಳ ಕೋಯ್ದೆ
     ಯೋಗಿಗಳ  ಯೋಗಿ ಶಿವಯೋಗಿ
     ಸಿದ್ಧರಾಮನೊಬ್ಬನೆ  ಯೋಗಿ  
ದುಗ್ಗಳೆ  ಎಂಬ ಶರಣೆಯು ಯೋಗಿಯಾದಡೆ ಸಿದ್ಧರಾಮಯ್ಯ ನಂತಾಗಬೇಕು ಎಂದು ಅಭಿಮಾನಪೂರ್ವಕವಾಗಿ ನುಡಿದ್ದ್ದಾಳೆ.
ಸಿದ್ದರಾಮನು ತನ್ನ ಸ್ವಂತ ಗಳಿಕೆಯಿಂದ ಬಡವರ ಸಾಲಗಳನ್ನು  ತೀರಿಸುತ್ತಾನೆ. ಈ ಕೆಲಸವನ್ನು ಇಂದು ಆಧುನಿಕ ಸರ್ಕಾರಗಳು  ಮಾಡುತ್ತಿರುವುದನ್ನು  ನಾವು  ಋುಣ  ಪರಿಹಾರವೆನ್ನುತ್ತೇವೆ. ಅಂದು ಸಿದ್ಧರಾಮರು  ತಾನೇ  ಸರ್ಕಾರ  (ಪ್ರಭುತ್ವ)  ಮಾಡಬೇಕಾದ  ಸಾಮಾಜಿಕ  ಕೆಲಸ  ಕಾರ್ಯಗಳನ್ನು  ಮಾಡುತ್ತಿದ್ದನು.  ಬಡವರಿಗಾಗಿ  ಕರ್ಮಯೋಗಿ ಸಿದ್ದರಾಮನು   ಹಗಲಿರುಳೆನ್ನದೆ ದುಡಿದಿದ್ದನು ಈ ಬಡವರು ಕಷ್ಟಪಡುವುದನ್ನು  ಕಂಡು ಪ್ರಗತಿಪರ  ಚಿಂತನೆಯುಳ್ಳ ಮತ್ತು  ಅಪಾರಾದ  ಮುನ್ನೌಟವಿದ್ದ  ಸಿದ್ದರಾಮನು  ಸಾಮೂಹಿಕ ವಿವಾಹಗಳ  ಕಾರ್ಯಕ್ರಮವನ್ನು  ಜಾರಿಗೆ  ತರುವನು.  ಈಗ ಸಿದ್ಧರಾಮನ ಪರಿಕಲ್ಪನೆಯು  ಜನಾನುರಾಗಿಯಾಗಿದೆ. ಪ್ರಸ್ತುತ  ಮಠಗಳು  ದೇವಸ್ಥಾನಗಳು, ಸ್ವಯಂ ಸೇವಾ  ಸಂಘಗಳು  ಉಚಿತ ಸಾಮೂಹಿಕ ವಿವಾಹ  ಸಮಾರಂಭಗಳನ್ನು  ಏರ್ಪಡಿಸುತ್ತಿವೆ. ಇದೇ ಕೆಲಸವನ್ನು ಸುಮಾರು  ಎಂಟುನೂರು ವರ್ಷಗಳ  ಹಿಂದೆ ಸಿದ್ದರಾಮನು ಮಾಡಿದ್ದನು.
ಸಿದ್ದರಾಮನ ವ್ಯಕ್ತಿತ್ವವು ಎಲ್ಲಾ  ಜನರಿಗೆ ಮಾದರಿಯಾಗಿದೆ.  ಆದರ್ಶ ಪ್ರಾಯವಾಗಿದೆ. ಹಿಂದುಳಿದ ವರ್ಗಗಳ  ಕುರುಬರೂ ಸೇರಿದಂತೆ  ರಾಜಕೀಯ ನಾಉಕರಿಗೆ ಮತ್ತು ಸ್ವಯಂ ಸೇವಾ ಸಂಘಗಳ  ಪದಾಧಿಕಾರಿಗಳಿಗೆ  ಸಿದ್ಧರಾಮನು  ಮತ್ತು ಆತನ ಸಮಾಜಮುಖಿ ವ್ಯಕ್ತಿತ್ವವು   ಆದರ್ಶಪ್ರಾಯವಾಗಿದೆ. ಸಂಆಜದ  ಎಲ್ಲಾ ವರ್ಗಗಳ  ಜನರು ಸಿದ್ಧರಾಮನ  ಜೀವನ  ವಿವರಗಳನ್ನು  ತಿಳಿಯುವು ದರಿಂದ, ಆತನ ವಚನಗಳನ್ನು ಅಧ್ಯಯನ  ಮಾಡುವುದರಿಂದ ಅವರಿಗೆ ಅಪಾರವಾದ, ಪ್ರಯೋಜನವಿದೆ.  ವೀರಶೈವ  ಸಮಾಜವು ಸಿದ್ಧ ಆಗಮನನ್ನು  ಗುರುಸ್ಥಾನದಲ್ಲಿಟ್ಟು  ಪೂಜಿಸುತ್ತಿದೆ. ಅದು  ಸಿದ್ದರಾಮನನ್ನು ಆರಾಧನಾಭಾವದಿಂದ ಕಂಡು ಗೌರವಿಸುತ್ತಿರುವುದು ಕುರುಬರಿಗೆ  ಮತ್ತು  ಇತರರಿಗೆ ಅನುಕರಣೀಯವಾಗಿದೆ.
ಹಾಲುಮತ ಕುರುಬ ಜನಾಂಗವು  ಶೈವ ಪಂಥಕ್ಕೆ ಜನ್ಮ  ನೀಡಿದ ಜನ ವರ್ಗವಾಗಿದೆ. ಇದು ಹಾಲುಮತ ಸಂಸ್ಕ್ಕತಿಯನ್ವಯ  ಹಿಂದೂ  ಧರ್ಮದ ಮತ್ತು ಸಮಾಜದ  ಮಹತ್ವವನ್ನು  ಹಾಗೂ ಅವುಗಳ  ಸಾಂಸ್ಕ್ಕತಿಕ  ಮೌಲ್ಯವನ್ನು  ಶ್ರೀಮಂತಗೊಳಿಸಿದೆಯೇ ಹೊರತು  ಕೆಲವರು  ಹೇಳುವಂತೆ  ತಳವರ್ಗ  ಕೆಳವರ್ಗ ವಾಗಿಲ್ಲ.  ಕುರುಬ ಸಮಾಜವು ಧಾರ್ಮಿಕವಾಗಿ ಶೈವ ಮೂಲ ಪಂಥಧ  ಜನಾಂಗ ವಾಗಿದೆ.  ರಾಜಕೀಯವಾಗಿ ಕ್ಷತ್ರಿಯ ಜನಾಂಗವಾಗಿದೆ. ಆದ್ದರಿಂದ  ಹಾಲುಮಂತ   ಕುರುಬಜನಾಂಗದವರು  ತಮ್ಮ ಕೀಳರಿಮೆಯನ್ನು ತೊರೆದು  ಶಿವಯೋಗಿ  ಸಿದ್ಧರಾಮನ  ಜೀವನ  ದರ್ಶನವನ್ನು ಸಂಪನ್ನಗೊಳಿಸಿಕೊಳ್ಳುವುದು ಯೋಗ್ಯವಾದ  ವಿಚಾರವಾಗಿದೆ

Article from - http://kannadamma.net/?p=29644

Kuruba Gowda Deity - ಚಿಂಚಲಿ ಮಾಯಕ್ಕದೇವಿ

ಹಾಲಹಳ್ಳ:
ಹಾಲಹಳ್ಳ ಚಿಂಚಲಿ ಗ್ರಾಮದ ಹತ್ತಿರ ಅರ್ಧ ಕಿ.ಮೀ. ಅಂತರದಲ್ಲಿದೆ. ಪಶ್ಚಿಮಕ್ಕೆ ಹರಿದು ಕ್ರಷ್ಣಾನದಿಯನ್ನು ಕೂಡಿಕೊಳ್ಳುತ್ತದೆ. ಮಾಯಕ್ಕನ ಮುಖ್ಯ ಐತಿಹ್ಯಗಳಲ್ಲಿ ಇದು ಒಂದು. ಈ ಹಳ್ಳಕ್ಕೆ ಹಾಲಹಳ್ಳ ಎಂದು ಹೆಸರು ಬರಲು ಕಾರಣವಾದ ಕಥೆಯನ್ನು ಜನರು ತಿಳಿಸುತ್ತಾರೆ. ಮಾಯಕ್ಕ ಊರ ಹೊರಗಿನ ಹಳ್ಳದ ಹತ್ತಿರ ಹೋದಳಂತೆ. ಕುರುಬರು ಕುರಿಕಾಯುತಿದ್ದರಂತೆ. ತನಗೆ ಹಾಲು ಬೇಕೆಂದು ಕೇಳಿದಾಗ ಅವರು ಕೊಡಲಿಲ್ಲವಂತೆ. ಶಕ್ತಿಯಿಂದ ಹಳ್ಳವೆಲ್ಲವೂ ಹಾಲಾಗಿ ಹರಿಯಲಿ ಎಂದಳಂತೆ. ಆಗ ಹಳ್ಳವೆಲ್ಲ ಹಾಲಾಗಿ ಹರಿಯಿತಂತೆ. ಅದಕ್ಕೆಂದೇ ಅದಕ್ಕೆ ಹಾಲಹಳ್ಳವೆಂದು ಹೆಸರು ಬಂತು ಎಂಬ ಕಥೆ ಇದೆ.
ಮಾಯಕ್ಕನ ಪೂಜೆಗೆ ನೀರು ಹಾಲಹಳ್ಳದಿಂದಲೆ ತರಲಾಗುತ್ತದೆ. ಕಾರಹುಣ್ಣಿಮೆ, ನೂಲುಹುಣ್ಣಿಮೆಗಳಲ್ಲಿ ಕುದುರೆ, ಪಲ್ಲಕ್ಕಿ ಹಾಲಹಳ್ಳದಲ್ಲಿ ಹೋಗಿ ಮಾಯಕ್ಕ ಅಲ್ಲಿ ಸ್ನಾನ ಮಾಡುವಳೆಂಬ ನಂಬಿಕೆಯಿದೆ.ಆಗ ಪಲ್ಲಕ್ಕಿ, ಕುದುರೆ, ಭಕ್ತರು ಹಾಲಹಳ್ಳಕ್ಕೆ ಹೋಗುತ್ತಾರೆ. ದೇವಿಯ ಹರಕೆ ಸೇವೆಗನ್ನು ಸಲ್ಲಿಸುವ ಭಕ್ತರು ಹಾಲಹಳ್ಳದ ಸ್ನಾನದಿಂದಲೆ ಆರಂಭಿಸುತ್ತಾರೆ. ಹಾಲಹಳ್ಳ ದಡದಲ್ಲಿ ಉಟ್ಟಿಗೆ ಉಡುವ ಹರಕೆಯನ್ನು ಜನರು ಸಲ್ಲಿಸುತ್ತಾರೆ. ಪಕ್ಕದಲ್ಲಿಯೇ ಕೃಷ್ಣಾನದಿ ಹರಿಯುತ್ತಿದ್ದರು ಮಾಯಕ್ಕನ ಸಂಬಂಧ ಹೆಚ್ಚಾಗಿ ಹಾಲಹಳ್ಳಕ್ಕೆ ಅಂಟಿಕೊಂಡಿದೆ.
ಕೀಲಕಟ್ಟಿ:

 
ಚಿಂಚಲಿ ಗ್ರಾಮದಲ್ಲಿ ಕಂಡು ಬರುವ ಅತಿ ಮುಖ್ಯ ಐತಿಹ್ಯವಾಗಿದೆ. "ಕೀಲ" ಮತ್ತು "ಕಟ್ಟ"ರೆಂಬ ರಾಕ್ಷಸರನ್ನು ಮಾಯಕ್ಕ ಚಿಂಚಲಿಯಲ್ಲಿ ಸಂಹಾರ ಮಾಡಿದಳಂತೆ. ಅವರ ಸಮಾಧಿ ಸ್ಥಳಗಳಿವು. ಈಗಲೂ ಕಂಡು ಬರುವ ಕೀಲಕಟ್ಟಿಗಳು ಊರ ಮಧ್ಯದಲ್ಲೊಂದು ಹಾಗೂ ಊರ ಆಚೆ ಒಂದು ಇದೆ. ಅವುಗಳನ್ನು ಒಳಗಿನ ಕಿಲಕಟ್ಟಿ ಹೊರಗಿನ ಕಿಲಕಟ್ಟಿ ಎಂದು ಕರೆಯುವ ವಾಡಿಕೆ ಇದೆ. ಪ್ರತಿ ಕಿಲಕಟ್ಟಿಯು ವಿಶಾಲವಾದ ಪ್ರಾಂಗಣವನ್ನು ಒಳಗೊಂಡಿವೆ. ಮಧ್ಯದಲ್ಲಿ ಚೌಕಾಕಾರದ ಪೂಜಾ ಸ್ಥಳ ಕಂಡು ಬರುತ್ತದೆ. ಅಲ್ಲಿ ಎರಡು ಚಿಕ್ಕ ಮಣ್ಣಿನ ದಿಣ್ಣೆಗಳನ್ನು ಕಾಣಬಹುದು. ಆ ಮಣ್ಣಿನ ಚಿಕ್ಕ ದಿಣ್ಣೆಗಳನ್ನು ಕೆಳಗೆ ವಿಶಾಲವಾದ ಮಣ್ಣಿನ ಹರಿವೆಗಳಿವೆ(ಹಗೆಗಳು). ಆ ತಗ್ಗುಗಳಲ್ಲಿ ಸುಮಾರು ಮೂರನಾಲ್ಕು ಚೀಲಗಳಷ್ಟು ಧಾನ್ಯ ತುಂಬಬಹುದು. ಯಾವಾಗಲು ಅವುಗಳ ಒಳಗೆ ಗುಂಡು ಕಲ್ಲುಗಳನ್ನು ತುಂಬಿ ಬಾಯಿ ಮುಚ್ಚಿ ಅದರ ಮೇಲೆ ಮಣ್ಣಿನ ಚಿಕ್ಕ ದಿಣ್ಣೆಗಳನ್ನು ಮಾಡಿ ಮೇಲೆ ಪೂಜಿಸಲಾಗುತ್ತದೆ.ಮೇಲೆ ಭಂಡಾರವನ್ನು ಹಾಕಲಾಗಿರುತ್ತದೆ. ೩ ವರ್ಷಗಳಿಗೊಮ್ಮೆ ನಡೆಯುವ ಕೀಲಕಟ್ಟರ ಜಾತ್ರೆಯಲ್ಲಿ ಬಾಯಿ ತೆರೆಯಲಾಗುತ್ತದೆ.
ಉಣ್ಣಿ ಮಟ್ಟೆಪ್ಪನ ಕಲ್ಲು:

 
ಹಾಲಹಳ್ಳದ ದಂಡೆಯ ಮೇಲೆ ದಿಣ್ಣೆಯ ಮೇಲೆ ಉಣ್ಣಿ ಮಟ್ಟೆಪ್ಪನ ಕಲ್ಲುಗಳನ್ನು ಈಗಲೂ ನೋಡಬಹುದು. ಈ ಐತಿಹ್ಯಕ್ಕೆ ಒಂದು ಕಥೆ ಕೇಳಿಬರುತ್ತದೆ.ಹಳ್ಳದ ದಡದಲ್ಲಿ ಕುರಿಕಾಯುತಿದ್ದ ಕುರುಬರಲ್ಲಿ ಕುರಿಯ ಉಣ್ಣೆ ಕೊಡುವಂತೆ ಕೇಳಿದಾಗ ಅವರು ಕೊಡಲಿಲ್ಲವಂತೆ.ಆಗ ಸಿಟ್ಟಿನಿಂದ ಮಾಯಕ್ಕ ಕುರಿಗಳೆಲ್ಲ ಕಲ್ಲಾಗಲಿ ಎಂದು ಶಾಪ ನಿಡಿದಳಂತೆ. ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ.ಹಾಲಹಳ್ಳದ ದಡದಲ್ಲಿ ಗುಂಪಾಗಿ ಬಿದ್ದ ಕಲ್ಲುಗಳಿಗೆ ಉಣ್ಣಿ ಮಟ್ಟೆಪ್ಪನ ಕಲ್ಲು ಎಂದು ಹೆಸರು ಬಂದಿತಂತೆ. ಪಲ್ಲಕ್ಕಿ ಹಳ್ಳಕ್ಕೆ ಬಂದಾಗ ಕುರುಬರು ಉಣ್ಣಿಯನ್ನು ತಂದು ಒಪ್ಪಿಸುತ್ತಾರೆ. ಅಂತಹ ಕಲ್ಲುಗಳು ಸುತ್ತ ಮುತ್ತ ಎಲ್ಲಿಯೂ ಕಂಡು ಬರುವುದಿಲ್ಲ. ಈ ಐತಿಹ್ಯ ಕುರುಬರಿಗೂ ಮಾಯಕ್ಕನಿಗೂ ನಿಕಟ ಸಂಬಂಧವನ್ನು ಕಲ್ಪಿಸುತ್ತದೆ.

ಗುಡ್ಡತಾಯಿ:
ಈ ಐತಿಹ್ಯ ಗ್ರಾಮದ ಉತ್ತರಕ್ಕೆ ಕಂಡು ಬರುತ್ತದೆ. ಗ್ರಾಮದಿಂದ ಒಂದು ಕಿ.ಮೀ. ದೂರವಾಗಬಹುದು. ಸಣ್ಣ ಗುಡ್ಡವಿದ್ದು ಅಲ್ಲೊಂದು ಚಿಕ್ಕ ಗುಡಿಯಿದೆ. ಅದರಲ್ಲಿ ಇರುವ ದೇವರನ್ನು ಮಾಯಕ್ಕನೆಂದೇ ಕರೆಯುತ್ತಾರೆ. ದಸರೆಯ ಬನ್ನಿ ಮುರಿಯುವ ಸಂದರ್ಭದಲ್ಲಿ ಕುದುರೆ, ಪಲ್ಲಕ್ಕಿ ಈ ಸ್ಥಳಕ್ಕೆ ಬರುತ್ತವೆ.

ಬಂಗಾರದ ಗಿಡ:
ಊರ ಹೊರಗೆ ಪೂರ್ವಕ್ಕೆ ಒಂದು ಕಿ.ಮೀ. ಅಂತರದಲ್ಲಿ ಇರುವ ಗುಂಪು ಮರಗಳು ತಾಣವೇ ಬಂಗಾರದ ಗಿಡ. ಇಲ್ಲಿ ಪಶ್ಚಿಮಕ್ಕೆ ಮುಖಮಾಡಿದ ಚಿಕ್ಕ ಮಾಯಕ್ಕನ ಗುಡಿ ಕಂಡು ಬರುತ್ತದೆ. ದಸರೆಯ ಬಣ್ಣಿ ಹಬ್ಬಕ್ಕೆ ಇದಕ್ಕೂ ಪ್ರಾಮುಖ್ಯತೆ ಇದೆ. ಜನರು ಇಲ್ಲಿಂದಾ ಬನ್ನಿಯನ್ನು ಬಂಗಾರವೆಂದು ಸ್ವಿಕರಿಸುವುದರಿಂದ ಬಂಗಾರದ ಗಿಡ ಎಂಬ ಹೆಸರು ಈ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ. ಮಳೆ ಕಡಿಮೆಯಾದಾಗ ಮಳೆಬರಲು ಬಂಗಾರ ಗಿಡದ ಜಾತ್ರೆ ಮಾಡಿದರೆ ಮಳೆಯಾಗುತ್ತದೆಂಬ ನಂಬಿಕೆ ಹಿರಿಯರಲ್ಲಿದೆ. ಈಗಲೂ ಬಂಗಾರ ಗಿಡದ ಜಾತ್ರೆ ನಡೆಯುತ್ತಿದ್ದರೂ ಅದಕ್ಕೆ ನಿಶ್ಚಿತ ದಿನಾಂಕಗಳು ಇಲ್ಲ. ಭಕ್ತರೆಲ್ಲ ಕೂಡಿದಾಗ ಮಂಗಳವಾರ, ರವಿವಾರ, ಶುಕ್ರವಾರ ಹೀಗೆ ಯಾವಗಲಾದರೂ ಜಾತ್ರೆ ಮಾಡುವುದುಂಟು. ಕಣಿ ಹೇಳುವುದು, ಡೊಳ್ಳಿನ ಪದ ಹಾಡುವುದು ಹಾಗೂ ಮಾಯಕ್ಕನ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಮಹಾ ಪ್ರಸಾದ ವ್ಯವಸ್ಥೆಯಾಗಿರುತ್ತದೆ.
 
From the website

ಕೋಲಾರದ ದೊಡ್ಡ ದ್ಯಾವರ ಜಾತ್ರೆ

ದೊಡ್ಡ ದ್ಯಾವರ ಜಾತ್ರೆ ೧೧ ವರುಷಗಳಿಗೆ ಒಮ್ಮೆ ನಡೆಯುವ ಜಾತ್ರೆ. ಈ ಜಾತ್ರೆಯು ಕೋಲಾರದಲ್ಲಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಪಲ್ಗೊಳಲು ಕರ್ನಾಟಕವಲ್ಲದೆ, ತಮಿಳು ನಾಡು ಹಾಗು ಆಂಧ್ರ ಪ್ರದೇಶಧಿಂದಲೂ  ಭಕ್ತಾದಿಗಳು ಬರುತ್ತಾರೆ. ಈ ಜಾತ್ರೆ ಏಪ್ರಿಲ್ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಡಿಯುತ್ತದೆ. ಜಾತ್ರೆ ಮೂರು ದಿನಗಳ ಕಾಲ ನಡಿಯುತ್ತದೆ. ಜಾತ್ರೆಗೆ ಬರುವ ಅಪಾರ ಸಂಖ್ಯೆ  ಭಕ್ತರು ಕೋಲಾರದ ನಗರ ದೇವತೆ ಕೋಲಾರಮ್ಮನ ದೇವಸ್ತಾನದ ಎದುರಿನಲ್ಲಿ ಇರುವ ಬೃಹದಾಕಾರದ ಕೋಲಾರಮ್ಮನ ಕೆರೆಯಲ್ಲಿ  ಸಣ್ಣ ಸಣ್ಣ ಗುಡಿಸಿಳುಗಳನ್ನು ಹಾಕಿಕೊಂಡು ಜಾತ್ರೆ ನಡಿಯುವ ಮೂರು ದಿನಗಳ ಕಾಲ ವಾಸಿಸುತ್ತಾರೆ. ಮಳೆ ಕಾಲ ಇನ್ನೂ ಶುರುವಾಗಿರದ ಕರಣ ಕೋಲಾರಮ್ಮನ ಕೆರೆಯಲ್ಲಿ ನೀರು ತುಂಬಾ ಇರುವುದಿಲ್ಲ , ಇದರಿಂದ ಕೆರೆಯ ದಡದಲ್ಲಿ ಲಕ್ಷಾಂತರ ಜನರು ತಂಗಬಹುದು. ಈ ಜಾತ್ರೆಯು ನೂರಾರು ವರುಷಗಳಿಂದ ಎಡೆಬಿಡದೆ ನಡೆದುಕೊಂಡು ಬಂದಿದೆ. ಈ ಜಾತ್ರೆಯಲ್ಲಿ ಕುರುಬ ಗೌಡರು ತಮ್ಮ ಕುಲ ದೇವತೆಗಳಾದ ಬೀರೇಶ್ವರ, ಬತ್ತೆಶ್ವರ , ಸಿದ್ದೇಶ್ವರ ಹಾಗು ಗುರುಮುರ್ತೆಶ್ವರ ದೇವರುಗಳನ್ನು ಪೂಜಿಸುತ್ತಾರೆ. ಕೋಲಾರಮ್ಮನ ಕೆರೆಯ ಪಕ್ಕದಲ್ಲಿರುವ ಕುರುಬರಪೇಟೆಯಲ್ಲಿ ಈ ದೇವರುಗಳ ದೇವಸ್ತಾನಗಳಿವೆ. ಈ ದೇವರುಗಳ ಉತ್ಸವ ಮೂರ್ತಿಗಳನ್ನು ಕೋಲಾರದದಿಂದ ಸುಮಾರು ೩ ಕಿಲೋಮೀಟರು ದೂರದಲ್ಲಿರುವ ಅಂತರಗಂಗೆ ಬೆಟ್ಟಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಬರುತ್ತಾರೆ, ಹಾಗೆ ಹೋಗಿ ಬರುವಾಗ ದಾರಿಯಲ್ಲಿ ಸಿಗುವ ಎಲ್ಲ ದೇವಸ್ತಾನಗಳ ಬಳಿ ನಿಲ್ಲಿಸಿ ಭಕ್ತರು ತಮ್ಮ ತಲೆಗಳ ಮೇಲೆ ತೆಂಗಿನಕಾಯಿ ಒಡೆಯುವ ಪವಾಡವನ್ನು ಮಾಡುತ್ತಾರೆ. ಈ ಜಾತ್ರೆಗೆ ಕುರುಬ ಗೌಡ ಕುಲಸ್ತರು ದೂರದ ಊರುಗಳಿಂದ ಬರುತ್ತಾರೆ. ತೆಂಗಿನಕಾಯಿ ಪವಾಡದ ಜೊತೆಗೆ " ಕುಲಸ್ತ ಮಹಾಕೂಟ", "ನಾಗ ದೇವತೆ ತನಿ", "ಬಿಲ್ವರ್ಚೆನೆ", "ಮೇಲುದೀಪ ಪೂಜೆ" ಇತ್ಯಾದಿ ಆಚರಣೆಗಳನ್ನು ಮಾಡುತ್ತಾರೆ.  ದಕ್ಷಿಣ ಕರ್ನಾಟಕದ ಹಳೆ ಕುರುಬ ಗೌಡರ ಎಲ್ಲ ಮನೆತನದ ಒಬ್ಬರಾದರು ತಮ್ಮ, ತಮ್ಮ , ಕುಲ ದೇವತೆಯನ್ನು ಪೂಜಿಸಲು ಇಲ್ಲಿಗೆ ಬಂದೆ ಬರುತ್ತಾರೆ. ಕರ್ನಾಟಕದ ಆಚರಿಸುವ ಹಬ್ಬಗಳಲ್ಲಿ ಇದು ಒಂದು ವಿಶಿಸ್ಟ ಹಬ್ಬ. ೨೦೦೯ ರಲ್ಲಿ ಅದ್ದೂರಿಯಾಗಿ ನಡೆದ ಜಾತ್ರೆ ಮತ್ತೆ ೨೦೨೦ ರಲ್ಲಿ ನಡೆಯುತ್ತದೆ, ಭಕ್ತಾದಿಗಳು ಹರಿಕೆಗಳನ್ನೂ ಮಾಡಿಕೊಂಡು ಮತ್ತು ತಮ್ಮ ಹರಿಕೆಗಳನ್ನೂ ತೀರಿಸಲು ಮತ್ತೆ ೧೧ ವರುಷಗಳ ಕಾಲ ಕಾಯಬೇಕು. ಈ ತರ ಜಾತ್ರೆಗಳನ್ನು ಕುರುಬ ಗೌಡರ ಪೂರ್ವಿಕರು ತಮ್ಮ ಜನಾಂಗದ ಜನರನ್ನು ಒಗ್ಗೂಡಿಸುವ ಮತ್ತು ತಮ್ಮ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಮಾಡಿರಬಹುದೆಂಬ ನಂಬಿಕೆ.

Great Kurubas 1 - Wet Grinder Sabapathy

Interesting to note that a commonly used thing nowadays in South India for the purpose of grinding rice into a semi liquid paste , for the making of Idly and Dosa is wet Grinder. The inventor of this surprisingly simple machine is a Kuruba Gowda from Coimbatore called Sabapathy. Sabapathy invented this machine in the 1950's which has become a household phenomenon now. Sabapathy's family were originally from Mysore District of Karnataka who settled in Tamil Nadu.
One can find good number of Kuruba Gowdas in the district surrounding the Nilgiri Hills. Mr Sabapathy went on to become a Industrialist and invented many more things, but none matched the success of the Wet Grinder. Sabapathy's son is also an entrepreneur.

http://timesofindia.indiatimes.com/city/coimbatore/How-a-wedding-gift-turned-into-a-freebie/articleshow/7829923.cms

Kannada Kuruba Gowdas of Tamil Nadu

Not many people know that a large population of Kannada Kurubas live in Tamil Nadu, the region surrounding the Nilgiri Hills all the way down the Western Ghats on the Tamil Nadu side. They have their distinct costumes and culture. The most important thing which differentiates them from the rest of the people of Tamil Nadu is thier language, they speak Kuruba Language a dialect of Kannada. Even though they have been Tamilised due to living in Tamil surrounding areas , they still manage to speak Kannada with a Tamil accent though.

According to some unofficial estimates their population is around 40 lakhs, which is a good number. These Kurubas are descendants of the Pallavas, after the fall of the empire they took shelter in the forests surrounding the Western Ghats, as a precaution and survival tactic from their enemies, this move of taking shelter in the foot hills of western ghats took their civilisation backwards from the peak during the Pallava Period. These Kurubas don't have any connections with their brothers in Karnataka, this link was lost long time ago and the Tamil Nadu Kurubas have developed their own traditions and culture, but the deities have remained the same. Some of them have married Karanataka Kurubas, but still remain out of the reach of mainstream Kurubas in Karnataka.

They have been long neglected by both the Karnataka and Tamil Nadu governments and are socially, economically and politically backward. But there are some promising signs from a few educated one who are taking up the cause of their people.


ಕುರುಬ ಗೌಡರು ಕೂಡಿ ಕೆಟ್ಟರು, ಗೊಲ್ಲ ಗೌಡರು ಚದುರಿ ಕೆಟ್ಟರು

I don't know if any of you guys have come across this saying in rural Karnataka, about Kuruba Gowdas and Golla Gowdas(Yadavas). Interestingly about 10 yrs ago I was working in a Dental college and there was a professor of Surgery called captain Dr Amarendra(more about him in later blogs), he was also the head of the department. A very interesting and learned man, with a good range of knowledge on varying subjects including politics and social sciences.

During one of the interactions with him I came across this saying, he told me that Kuruba Gowdas can never be united as it is in their genes to fight among themselves if they get together and the example he gave me was politics, Kuruba Gowdas being probably the second largest community in Karnataka had only about 4 or 5 elected Members of Legislative Assembly(MLA). He told me that our ancestors for no reason wouldn't say the above saying. He said they would have observed our community for ages before coming up with this saying.

When analysed logically this could be true. Kuruba Gowdas traditionally have tended sheep's and they take hundreds of sheep's together and go into the forests, with maybe a dog to watch over them and a few sheep in the herd. Sheep generally tend to stick together and are easy to control and they don't tend to stray too far. Sheep can live with minimal grass availability and can scrape through to even the last blade of grass. So it makes sense for one person to lead his herd of sheep into the grazing fields and back home. Again its sometimes difficult to keep a tab on all the sheep, so its better off that different herds of sheep stay with one person at different places which makes sense.

Where as Golla Gowdas have to tend for the cows, which is a more difficult job then tending the sheep. The cows are much larger, difficult to control, need more food to sustain them and the herds are not as large as the sheep herds. So it makes sense that a group of Golla Gowdas bring all their cows together into one single herd and go for foraging in the grazing fields. They have more eyes watching over any animal straying away and also it is easy to identify the cows at the end of the day and split them into their individual groups.

Maybe this over hundreds of years has developed into a genetic aspect of all Kuruba Gowdas, they tend to prosper when they are alone, but tend to fight when they come together. I feel its about time we reversed this genetic trait and move forward into a new future together.





ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬರು

ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಲಿಖಿತ ಆಕರಗಳಿಗಿಂತ ಮೌಖಿಕ ಆಕರಗಳಲ್ಲಿ ಹೆಚ್ಚಿನ ಆಧಾರಗಳು ಸಿಗುತ್ತವೆ. ಅವುಗಳನ್ನು ಈಗ ಅವಲೋಕಿಸಬಹುದು. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ರೇವಣಸಿದ್ಧೇಶ್ವರನದು ಪ್ರಸಿದ್ಧ ಹೆಸರು. ಕುರುಬರ ಗುರುಪರಂಪರೆ   ಯಲ್ಲಿಯಂತೂ ಈತನಿಗೆ ಮೊದಲ ಪ್ರಾಶಸ್ತ್ಯ. ಮೌಖಿಕ ರೂಪದ ತಗರ ಪವಾಡ ಗ್ರಂಥವು ಕುರುಬರ ಸಂಸ್ಕೃತಿಯನ್ನು ಅನಾವರಣಗೊಳಿಸುವ ಒಂದು ದೇಶಿ ಕಾವ್ಯ. ಈ ಕಾವ್ಯದ ಕಥಾನಾಯಕನಾದ ಶಾಂತಮುತ್ತಯ್ಯನು ರೇವಣಸಿದ್ಧ ಪರಂಪರೆಯನ್ನು ಮುಂದುವರೆಸಿದವನು.

ಬಿಜಾಪುರ ಜಲ್ಲೆಯ ಸರೂರು, ಮೈಸೂರು ಜಿಲ್ಲೆಯ ಕಳಲೆ, ಚಿತ್ರದುರ್ಗ ಜಿಲ್ಲೆಯ ಹುಲ್ಲೂರು, ಧಾರವಾಡ ಜಿಲ್ಲೆಯ ಕಾಮಧೇನು, ಹಾಸನ ಜಿಲ್ಲೆಯ ಅಣತಿ, ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿ, ತುರುವೇಕೆರೆ, ಹಂದನಕೆರೆ, ಬಳ್ಳಾರಿ ಜಿಲ್ಲೆಯ ಗಾದಿಗನೂರು ಹೀಗೆ ಕರ್ನಾಟಕದಾದ್ಯಂತ ರೇವಣಸಿದ್ಧನ ಹೆಸರಿನಲ್ಲಿ ನೂರಾರು ಕುರುಬರ ಮಠಗಳಿವೆ. ಲಿಖಿತ ಮತ್ತು ಮೌಖಿಕ ಸಾಮಗ್ರಿಗಳು ರೇವಣಸಿದ್ಧ ಕುರುಬ ಸಮುದಾಯಕ್ಕೆ ಸೇರಿದವನೆಂಬುದನ್ನುಸ್ಪಷ್ಟಪಡಿಸುತ್ತವೆ.

ಇನ್ನು ಸಿದ್ಧರಾಮನು ಮೂಲತಃ ಕುರುಬ ಸಮುದಾಯಕ್ಕೆ ಸೇರಿದವನೆಂದು ಹೇಳಲಿಕ್ಕೆ ಲಿಖಿತ ಮತ್ತು ಮೌಖಿಕ ಆಕರಗಳಲ್ಲಿ ಸಾಕಷ್ಟು ಪುರಾವೆಗಳಿವೆ. ಸಿದ್ಧಮಂಕ ಚರಿತೆ ಮತ್ತು ಮರುಳಸಿದ್ಧೇಶ್ವರ ಚರಿತೆ ಎಂಬ ದೇಶೀ ಕಾವ್ಯಗಳು ಸಿದ್ಧರಾಮ ಸಂಪ್ರದಾಯದ ಸಿದ್ಧಮಂಕನ ಚರಿತ್ರೆಯನ್ನು ನಿರೂಪಿಸುತ್ತವೆ. ಸಿದ್ಧಮಂಕನಿಗೆ ಪರ್ಯಾಯವಾಗಿ ಮರುಳಸಿದ್ಧ ಎಂದೂ ಕರೆಯಲಾಗಿದೆ. ಈ ಸಿದ್ಧಮಂಕನ ಸಂಪ್ರದಾಯದ ಒಡೆಯರನ್ನು ಮಂಕೊಡೆಯರು ಎಂದು ಕರೆಯುತ್ತಾರೆ. ಬಿಜಾಪುರ ಜಿಲ್ಲೆಯ ಸರೂರು ಚಿಕ್ಕನಾಯ್ಕನಹಳ್ಳಿ, ತರೀಕೆರೆ ತಾಲೂಕಿನ ಸೊಲ್ಲಾಪುರ, ಹಾಸನ ಜಿಲ್ಲೆಯ ಬಾಣಾವರ ಮೊದಲಾದಡೆ ಸಿದ್ಧರಾಮನ ಹೆಸರಿನ ಕುರುಬರ ಮಠ ಮಂದಿರಗಳಿವೆ. ಮಂಕೊಡೆಯರು ಈ ಮಠಗಳ ಪೀಠಾಧಿಪತಿಗಳು. ಸಿದ್ಧರಾಮನಿಗೂ ಕಂಥೆಸೇವೆ ಅರ್ಪಿಸುವ ಪದ್ದತಿ ಕುರುಬರಲ್ಲಿದೆ.

ಮಹಾರಾಷ್ಟ್ರದ ಸೊಲ್ಲಾಪುರದ ಸಿದ್ಧರಾಮೇಶ್ವರನು ಧನಗರ (ಕುರುಬರು) ಸಮುದಾಯದ ಆರಾಧ್ಯ ದೈವವಾಗಿದ್ದಾನೆ. ಅಲ್ಲಿನ ಪೂಜಾರಿಗಳು ಮೂಲತಃ ಕುರುಬರಾಗಿದ್ದು, ಈಗ ಅವರಿಗೆ ಹಬ್ಹು ಎಂದು ಕರೆಯಲಾಗುತ್ತದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಖ್ಯಾತ ಸಂಶೋಧಕರಾದ ಚಿಂತಾಮಣಿ ಢೇರೆಯವರ ಅಭಿಪ್ರಾಯ ಹೀಗಿದೆ :   ‘ಸಿದ್ಧರಾಮೇಶ್ವರನು ದಕ್ಷಿಣದಲ್ಲಿ ಪಶುಪಾಲಕ (ಕುರುಬ) ಜನಾಂಗದ ಪರಂಪೆಯಲ್ಲಿನ ಒಬ್ಬ ಮಹಾನ್ ಸಿದ್ಧಪುರುಷ ಎಂಬುದು ಸ್ಪಷ್ಟವಾಗುತ್ತದೆ.  ಸಿದ್ಧರಾಮನ ಜನನದ ಭವಿಷ್ಯವನ್ನು ಹೇಳಿದ ರೇವಣಸಿದ್ಧನು ಕೂಡ ಕುರುಬ ಜನಾಂಗದಲ್ಲಿಯ ಸಿದ್ಧಪುರುಷನೇ ಆಗಿದ್ದಾನೆ.

ಅದೂ ಅಲ್ಲದೆ ಸಿದ್ಧರಾಮೇಶ್ವರನು ಹುಟ್ಟಿದಾಗ ಆತನ ತಂದೆ ತಾಯಿಗಳು ಅವನಿಗೆ ಇಟ್ಟಿರುವ ಹೆಸರು ಅವರ ಕುಲದೇವರಾದ ಧೂಳಿಮಹಾಂಕಾಳನದು. ಈ ಧೂಳಿಮಹಾಂಕಾಳನು ಪಶುಪಾಲಕ (ಕುರುಬ ) ಸಮಾಜದ ದೈವವಾಗಿದ್ದಾನೆ. ಈ ದೈವದ ಬಗ್ಗೆ ಪಶುಪಾಲಕ ಸಮಾಜದಲ್ಲಿ ಇಂದಿಗೂ ಅಪಾರ ಭಕ್ತಿಭಾವವಿದೆ. ಹಾಗೆಯೇ ಮಕ್ಕಳ ಸಂರಕ್ಷಣೆ ಮತ್ತು ಸಂವರ್ಧನೆಯ ವಿಚಾರದಲ್ಲಿಯೂ ಈ ಸಮಾಜದ ಜನ ಧೂಳಿಮಹಾಂಕಾಳನಲ್ಲಿ ಎಂಥ ಮೇಲ್ಮಟ್ಟದ ಶ್ರದ್ಧೆಯನ್ನು ಹೊಂದಿದ್ದಾರೆ ಎಂಬುದು ಅವಶ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ? (ಮಲ್ಲಿಕಾರ್ಜುನ ಮತ್ತು ಮಹಾರಾಷ್ಟ್ರ, ಪುಟ.100). ಹೀಗೆ ರೇವಣಸಿದ್ಧ ಮತ್ತು ಸಿದ್ಧರಾಮರು ಕುರುಬ ಮೂಲದವರು ಎನ್ನಲಿಕ್ಕೆ ಲಿಖಿತ ಮತ್ತು ಮೌಖಿಕ ರೂಪದಲ್ಲಿರುವ ಆಕರಗಳು ಪುಷ್ಟಿಯನ್ನು ನೀಡುತ್ತವೆ. ಹೀಗಾಗಿ ಕೆ.ಆರ್.ಬಸವರಾಜು ಅವರು  ‘ಸಿದ್ಧರಾಮನ ಪೂರ್ವಾಶ್ರಮದ ಜಾತಿ ಬಗ್ಗೆ ಹೇಳಿರುವ ಹೇಳಿಕೆಯು ತರ್ಕಬದ್ಧ, ಆಧಾರಸಹಿತ, ಸಮರ್ಥನೀಯ ಸಂಶೋಧನೆಯಾಗಿಲ್ಲ’ ಎಂದು ಹೇಳುವುದು ಸರಿಯಾದುದಲ್ಲ

News article from Prajavani -