ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಗಿರುವ ಕಪ್ಪತಗುಡ್ಡ ಗದಗ, ಶಿರಹಟ್ಟಿ, ಮುಂಡರಗಿ ತಾಲ್ಲೂಕಿನಲ್ಲಿ ಹರಡಿಕೊಂಡ ಔಷಧಿ ಸಸ್ಯಗಳ ಆಗರ. ಗದಗ ಜಿಲ್ಲೆಯ ಸುಮಾರು 33 ಸಾವಿರ ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ಕಪ್ಪತ್ತಗುಡ್ಡ, ಗದುಗಿನ ಬಿಂಕದಕಟ್ಟಿಯಿಂದ ಪ್ರಾರಂಭವಾಗಿ ಮುಂಡರಗಿ ತಾಲ್ಲೂಕಿನ ಸಿಂಗಾಟಲೂರಿನವರೆಗೆ ಹಬ್ಬಿಕೊಂಡಿರುವ ಈ ವನದ ಒಡಲಿನಲ್ಲಿ ನೂರಾರು ಜಾತಿಯ ಔಷಧಿ ಸಸ್ಯಗಳಿವೆ
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಪಟ್ಟಣದ ಬೀದಿಗಳಲ್ಲಿ ಕುರಿಗಳ ಹಿಂಡೇ ಹಿಂಡು. ಸಾವಿರಾರು ಕುರಿಗಳು ಹಿಂಡಾಗಿ ಕಪ್ಪತ್ತಗುಡ್ಡದತ್ತ ಪ್ರಯಾಣ ಬೆಳೆಸುವುದೇ ಪ್ರತಿವರ್ಷದ ವಿಶೇಷ. ಮಳೆಗಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ದೂರದ ಮಹಾರಾಷ್ಟ್ರದ ಗಡಹಿಂಗ್ಲಜ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ಆಗಮಿಸುವ ಕುರಿಗಳು ಮತ್ತು ಕುರುಬರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಮಳೆಗಾಲದಲ್ಲಿ ಕುರಿಗಳನ್ನು ಕಟ್ಟಿಕೊಂಡು ಸಂಚಾರ ಮಾಡುವುದು ಕಷ್ಟದ ಕೆಲಸ. ವಿಶಾಲವಾಗಿರುವ ಕಪ್ಪತ್ತಗಿರಿಯತ್ತ ಸಾಗಿ ಮುಂಗಾರು ಮಳೆಗೆ ಅಲ್ಲಿ ಬೆಳೆದಿರುವ ಹುಲ್ಲು ತಿನ್ನಲು ಬೀಡು ಬಿಡುವರು. ಹುಲ್ಲಿನಲ್ಲಿರುವ ಅತ್ಯಧಿಕ ಪ್ರಮಾಣದ ಖನಿಜಾಂಶ ಕುರಿಗಳಿಗೆ ಇಷ್ಟದ ಆಹಾರ. ಕಪ್ಪತ್ತಗುಡ್ಡದ ಹುಲ್ಲು ತಿಂದರೆ ಕುರಿಗಳಿಗೆ ಯಾವುದೇ ರೋಗ ಬಾಧಿಸುವುದಿಲ್ಲ ಎಂಬುದು ಅವರ ನಂಬಿಕೆ. ಮಹಾರಾಷ್ಟ್ರದ ಕುರುಬರು ಮಾತ್ರವಲ್ಲ. ಗುಡ್ಡದ ಸುತ್ತಲಿನ ರೈತರೂ ತಮ್ಮ ಜಾನುವಾರುಗಳಿಗೆ ಪ್ರತಿವರ್ಷ ಇಲ್ಲಿ ಬೆಳೆದಿರುವ ಹುಲ್ಲನ್ನು ತಿನ್ನಿಸುತ್ತಾರೆ. ಆಹಾರದ ಜೊತೆಗೆ ಕುರಿ ಮತ್ತು ಜಾನುವಾರುಗಳು ಸುರಕ್ಷಿತವಾಗಿರುತ್ತವೆ. ಮಳೆಗಾಲ ಮುಗಿಯುತ್ತಿದ್ದಂತೆ ಆಹಾರದ ಬೇಟೆ ಮುಂದೆ ಸಾಗುತ್ತದೆ.

No comments:
Post a Comment