ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ಬೀರೇಶ್ವರ ದೇವರನ್ನು ಆರಾಧಿಸುವುದು ಡೊಳ್ಳು ಕುಣಿತ ವಿಶಿಷ್ಟವಾದದ್ದು. ಮೂಲತಃ ಶೈವಾರಾಧಕರಾದ ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿಯುವುದು ಆಕರ್ಷಕ ಜನಪದ ನರ್ತನವಾಗಿದೆ. 12ಮಂದಿಯ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ನಡೆಯುತ್ತದೆ. ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶವಾಗಿದೆ. ಈ ಸಂದರ್ಭದಲ್ಲಿ ಹಾಲುಮಾತಾ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಯಾಗಿದೆ.
No comments:
Post a Comment