Sunday, January 30, 2011

ಗೌಡ

ಗೌಡ ಎಂಬುದು ಯಾಹುದೇ ಜಾತಿಯ ಹೆಸರಲ್ಲ, ಗೌಡ ಎಂದರೆ ಊರಿಗೆ ದೊಡ್ಡವನು, ಅಥವಾ ಒಂದು ಸಮಾಜಕ್ಕೆ ದೊಡ್ಡವನು, ಅಥವಾ ಒಂದು ಮನೆತನದ ದೊಡ್ಡವನು. ಕರ್ನಾಟಕದ ಎಲ್ಲ ಜಾತಿಯ ಜನರು ತಮ್ಮ ಹಿರಿಯರನ್ನು ಸಂಬೋಧಿಸಲು ಗೌಡ ಎಂಬ ಪದವನ್ನು ಬಳಿಸುತ್ತಾರೆ. ಉದಾಹರೆಣೆಗೆ ಸೋಲಿಗರು ಹಾಗು ಕಾಡು ಕುರುಬರು ತಮ್ಮ ಊರಿನ ಹಿರಿಯನನ್ನು ಗೌಡ ಎಂದರೆ, ತಮ್ಮ ಊರಿನೆ ಪೂಜಾರಿಯನ್ನು ದೇವರಗೌಡ ಅಥವ ದೇವರಗುಡ್ಡ ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಗೌಡ ಎಂಬುದು ಒಂದು ಸಮಾಜದ ಹೆಸರು ಎಂಬ ರೀತಿಯಲ್ಲಿ ಕೆಲವರು ಬಿಂಬಿಸ ತೊಡಗಿದ್ದಾರೆ, ಇದರಲ್ಲಿ ರಾಜಕೀಯ ಪ್ರೇರಣೆಯು ಇದೆ.

No comments:

Post a Comment