Sunday, January 30, 2011

ಕೋಲಾರಮ್ಮ

ಕೋಲಾರಮ್ಮ ಕೋಲಾರದ ನಗರ ದೇವತೆ. ಶಿವನ ಪತ್ನಿ ಪಾರ್ವತಿಯ ಇನೋನ್ದು ಶಕ್ತಿ ರೂಪ. ಶಕ್ತಿ ದೇವತೆ ಕೋಲಾರದಲ್ಲಿ ನೆಲಸಿ ಜನರನ್ನು ನೂರಾರು ವರುಷಗಳಿಂದ ಕಾಪಾಡಿಕೊಂಡು ಬಂದ ನಗರದ ದೇವತೆ. ನಾಡ ದೇವತೆ ತಾಯಿ ಚಾಮುಂಡೆಶ್ವರಿಯ ಪ್ರತಿರೂಪ. ನಾಡ ಪ್ರಭುಗಳಾಗಿದ್ದ ಮೈಸೂರಿನ ಅರಸರ ಕುಲ ದೇವತೆ. ಪ್ರತಿ ವರುಷ ತಪ್ಪದೆ ಮೈಸೂರಿನ ಅರಸರು ಕೋಲಾರಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸುವ ಕಾಲವಿತ್ತು, ಆದರೆ ಸ್ವಾತಂತ್ರದ ನಂತರ ಈ ಸಂಪ್ರದಾಯ ಮುಂದುವರಿಯಲಿಲ್ಲ. ಅಂದಿನ ನಾಡ ಪ್ರಭು ಜಯಚಾಮರಾಜೇಂದ್ರ ಒಡೆಯರ್ ರವರು ಕೋಲಾರಕ್ಕೆ ಬರುತಿದುದನ್ನ, ಅವರ ವೈಭವವನ್ನ, ರಾಜ ಗಾಮ್ಬಿರ್ಯವನ್ನು ನನ್ನ ತಾಯಿ ಹಾಗು ಕೋಲಾರದ ಬಿ ಸೀ ಜಯ ಇಂದಿಗೂ ನೆನೆಸಿಕೊಳುತ್ತಾರೆ. ಕೋಲಾರದ ಅದಿದೇವತೆಗೆ ಅಪಾರ ಶಕ್ತಿ ಇದೆ, ಈ ದೇವತೆಯನ್ನು ನೆರವಾಗಿ ನೋಡಬಾರದು ಏಕೆಂದರೆ ಈ ದೇವಿಯ ರೂಪವು ಅತ್ಯಂತ ಬಯಾನಕ ಆಗು ಉಗ್ರ, ದೇವತೆಯ ದರ್ಶನ ಗರ್ಬಗುಡಿಯಲ್ಲಿ ಇರುವ ಕನ್ನಡಿಯಲ್ಲಿ ನೋಡಿ ಪಡಿಯಬೇಕು. ಎಸ್ಟೆ ಉಗ್ರವಾಗಿ ತಾಯಿ ಕಂಡರೂ ಈಕೆ ಅಷ್ಟೇ ಕರುಣಾಮಯಿ. ಈಗಿನ ಕೋಲಾರಮ್ಮ ದೇವಸ್ಥಾನವನ್ನು ಚೋಳರ ಕಾಲದಲ್ಲಿ ಕಟ್ಟಿಸಿದರಾದರು ಅದಕ್ಕೂ ಮೊದಲೇ ಸಾವಿರಾರು ವರ್ಷಗಳಿಂದ ತಾಯಿ ಇಲ್ಲಿ ನೆಲಸಿದ್ದಳೆದು ನಂಬಿಕೆ. ದೇವಸ್ತಾನದ  ಪ್ರವೇಶ ದ್ವಾರದ ಗೋಪುರ ಈಗ ಇಲ್ಲ, ಗೋಪುರವು ಮೊದಲು ಇತ್ತೇ ಅಥವಾ ಗೂಪುರವಿಲ್ಲದೇನೆ ಕಟ್ಟಿಸಿದರೆ ಯಾರಿಗೂ ಗೊತ್ತಿಲ್ಲ. ಈ ದೇವಸ್ತನವು ಸುಮಾರು ೧೦೦೦ವರಷಗಳಷ್ಟು ಹಳೆಯದಾದದ್ದು. ಕೋಲಾರಮ್ಮ ಗರ್ಬಗುಡಿಯ ಪಕ್ಕದಲ್ಲಿಯೇ ಚೇಳಮ್ಮ ನೆಲೆಸಿದ್ದಾಳೆ. ದೇವಸ್ತಾನದ ಎದುರಿನಲ್ಲಿಯೇ ಬ್ರಿಹತ್ ಆದ ಕೋಲಾರಮ್ಮನ ಕೆರೆ ಇದೆ. ಕೆರೆ ಕೋಡಿ ಬಿದ್ದ ವರುಷಗಳಲ್ಲಿ ತಾಯಿಗೆ ವಿಶೇಷ ಪೂಜೆ ಹಾಗು ತೆಪ್ಪೋತ್ಸವ ನಡಿಯುತ್ತದೆ. ದಸರಾ ಹಬದ್ದಂದು ದೇವಿಯ ದರುಶನಕ್ಕೆ ಅಪಾರ ಸಂಕ್ಯೆಯ ಬಕ್ತರು ಬರುತ್ತಾರೆ

No comments:

Post a Comment