Sunday, May 20, 2012

Great Kurubas 2 - ಕರ್ಮಯೋಗಿ ಕುರುಬರ ಶ್ರೀ ಸಿದ್ದರಾಮ

ಸಿದ್ದರಾಮನು ಶ್ರೀಶೈಲದ  ಮಲ್ಲಿಕಾರ್ಜುನ  ರಮಭಕ್ತ ಈ ಶ್ರೀಶೈಲವು  ಒಂದು ಪ್ರಸಿದ್ಧ ಮೈಲಾರಲಿಂಗ ಕ್ಷೇತ್ರವಾಗಿತ್ತು.  ಆದ್ದರಿಂದಲೇ ಮುಂದೆ ಕಲ್ಯಾಣಕ್ಕೆ ಹೋಗಿ  ಲಿಂಗದೀಕ್ಷೆ ಪಡೆದು ವಚನಕಾರನಾದಾಗ ತನ್ನ ಇಷ್ಟ ದೈವವಾದ ಶ್ರೀಶೈಲದ ಮಲ್ಲಿಕಾರ್ಜುನನನ್ನು ಸ್ಮರಿಸಲು ಕಪಿಲಸಿದ್ಧ ಮಲ್ಲಿಕಾರ್ಜುನಾ ಎಂಬ ಅಂಕಿತನಾಮವನ್ನು ಇಟ್ಟುಕೊಳ್ಳುತ್ತಾನೆ ಸಿದ್ಧರಾಮ, ಮಲ್ಲಿಖಾರ್ಜುನನೆಂಬುದು ಕುರುವಮಲ್ಲಯ್ಯ  ಸಂಸ್ಕತೀಕರಣಗೊಂಡ ರೂಪವಾಗಿದೆ.  ಅವನು ಬಾಲಕನಾಗಿದ್ದಾಗಲೇ ಶ್ರೀಶೈಲದ  ಮಲ್ಲಿಕಾರ್ಜುನನ ಕರೆಗೆ ಓಗೊಟ್ಟು  ಮನೆ ತೊರೆದು ಶ್ರೀಶೈಲಕ್ಕೆ ಹೋಗುವನು.  ಅಲೆದಲೆದು ಕಾಲ್ನಡಿಗೆಯಲ್ಲೇ  ನೂರಾರು  ಮೈಲುಗಲ್ಲುಗಳನ್ನು ಶ್ರಮಿಸಿ ಶ್ರೀಶೈಲ  ತಲುಪುವ ಬಾಲಕ ಧೂಳಿಮಾಕಾಳ  ಅಲ್ಲಿ ಮಲ್ಲಿಕಾರ್ಜುನನಿಗೆ ಸೇವೆ  ಸಲ್ಲಿಸುತ್ತಾನೆ. ಅಲ್ಲಿ  ಆತನಿಗೆ ಶಿವ ಸಾಕ್ಷಾತ್ಕಾರ ವಾಗುವುದು.  ಆದ್ದರಿಂದ  ಆತನು  ಸ್ವಯಂ ಸಿದ್ಧರಾಮನೆಂದು ಹೆಸರು ಧರಿಸುತ್ತಾನೆ. ಹೀಗೆ  ಬಾಲಕನಾಗಿದ್ದಾಗಲೇ ಭಗವಂತನನ್ನರಸಿ ಹೋದ  ಮಹಾಭಕ್ತ ಸಿದ್ಧರಾಮ, ಈತ ಮುಂದೆ  ಪುನಃ  ತನ್ನ   ಊರಾದ ಸೊನ್ನಲಿಗೆ  ಬಂದು ಮಲ್ಲಿಕಾರ್ಜುನನ ಆತ್ಮ ಲಿಂಗವನ್ನು ಶ್ರೀಶೈಲದಿಂದ ತಂದು ಅಲ್ಲಿ ಪ್ರತಿಷ್ಠಾಪಿಸಿ  ದೇವಸ್ಥಾನ ಕಟ್ಟಿಸುತ್ತಾನೆ. ಅದು ಇಂದಿನ ಸೊಲ್ಲಾಪೂರ ಪಟ್ಟಣದಲ್ಲಿದೆ. ಹೀಗೆ ಆತನ ಸಮಾಜಮುಖಿ ಬದುಕು  ಯೌವ್ವನದಲ್ಲೇ ಪ್ರಾರಂಭವಾಗುತ್ತದೆ. ಸಿದ್ಧರಾಮ ಸೊಲ್ಲಾಪುರದಲ್ಲಿ  ಕೆರೆಯನ್ನು ಕಟ್ಟಿಸಿ, ಛತ್ರಗಳನ್ನು ಕಟ್ಟಿಸಿ, ಅನ್ನದಾನ  ಮಾಡುತ್ತಾ  ಜನರ  ಕಂದಾಚಾರ ಮೌಡ್ಯಗಳನ್ನು ಪರಿಹರಿಸುತ್ತಾ ಅವರನ್ನು ಉದ್ದರಿಸಲು   ಪ್ರಯತ್ನಿಸಿರುವುದು ಕಂಡು  ಬರುತ್ತದೆ.  ನಿರ್ಗತಿಕರಿಗಾಗಿ  ಸಾವಿರ  ಮದುವೆಗಳನ್ನು  ಮಾಡುತ್ತಾನೆ. ಸಾಲಗಾರರ (ಜನರು ಇತರರಲ್ಲಿ  ಸಾಲ ಮಾಡಿದ್ದು ಸಾಲವನ್ನು  ತೀರಿಸುವ  ಕೆಲಸವನ್ನು  ಮಾಡುತ್ತಾನೆ. ಸಮಾಜ  ಸುಧಾರಣೆಯ  ಅವನ  ಕೆಲಸಗಳು ಅವಿಸ್ಮರಣೀಯ ಕರ್ಮಯೋಗಿ  ಎಂಬ ಬಿರುದು ಅವನಿಗೆ  ಸಲ್ಲುತ್ತದೆ. ಶೈವಭಕ್ತಿಯ  ಜೊತೆ ಜೊತೆಗೇ ಜನಹಿತಾಸಕ್ತಿ ಅವನ ಬದುಕಿನ ಎರಡು ಕಣ್ಣುಗಳಾಗಿದ್ದವು. ಅವನಿಗೆ ಮೂರು ಕಣ್ಣುಗಳಿದ್ದವೆಂದು ಪ್ರತೀತಿ. ಇವನು ಯೋಗಶಕ್ತಿ  ಪವಾಡ ಶಕ್ತಿಗಳಿಂದ  ಇಡೀ ಜನ ಸಮೂಹದ ಆರಾಧ್ಯ  ದೈವವಾಗಿದ್ದನು. ಆದ್ದರಿಂದಲೇ ಬಿಜ್ಜಳ ಸತ್ತು ಅವನ ಮಗನಾದ  ಸೋವಿದೇವನಿಗೆ  (ಇಮ್ಮಡಿ ಬಿಜ್ಜಳ) ಒಟ್ಟಾಭಿಷೇಕ ನಡೆಸಲು ಪ್ರಯತ್ನಗಳು ಸಾಗುತ್ತಿದ್ದಾಗ  ಬಿಜ್ಜಳನ  ಸೋದರನಾದ ಕರ್ಣದೇವ ತಾನು ಅಧಿಕಾರಕ್ಕೇರಲು  ಪ್ರಯತ್ನಿಸುತ್ತಾ ಕಳಿಸುತ್ತಾನೆ. ಆದರೆ ಸಿದ್ಧ ರಾಮನನ್ನು ಅದನ್ನು ನಿರಾಕರಿಸಿ  ತನ್ನ ಎಂದಿನ ಸಮಾಜೋದ್ದಾರದ ಕೆಲಸ ಕಾರ್ಯಗಳಲ್ಲಿ ಮಗ್ನನಾಗುತ್ತಾನೆ. ಹೀಗೆ  ಸಿದ್ಧರಾಮನು ಯೌವ್ವನದಲ್ಲೇ ಸೊಲ್ಲಾಪುರ ಮತ್ತು  ಕಲ್ಯಾಣ ಭಾಗದಲ್ಲೆಲ್ಲಾ ಪ್ರಸಿದ್ಧನಾಗಿದ್ದನು.
ಇಮ್ಮಡಿ  ಬಿಜ್ಜಳನ ಸಾವಿನ ನಂತರ  ರೇವಣ ಸಿದ್ದೇಶ್ವರರು  ಮಂಗಳವಾಡ ವನ್ನು ತೊರೆದು ದಕ್ಷಿಣ ಭಾರತದತ್ತ ವಿಶೇಷವಾಗಿ ದಕ್ಷಿಣ  ಕರ್ನಾಟಕದತ್ತ ಲೋಕ  ಸಂಚಾರವನ್ನಾರಂಭಿಸುತ್ತಾರೆ. ಆಗ ಅವರ ಜತೆಗೆ  ರೇವಣ  ಸಿದ್ದೇಶ್ವರರ  ಪುತ್ರ ರುದ್ರಮುನಿ  ಮತ್ತು ಸಿದ್ದರಾಮ  ಹಾಗೂ  ಮರಳಸಿದ್ದ ಎಂಬುವವರಿದ್ದರು. ಸಿದ್ಧರಾಮನು ಬದುಕಿದ್ದಾಗಲೇ  ದೇವತ್ವಕ್ಕೇರಿದ ಮಹಾಮಾನವ, ಸಿದ್ಧರಾಮನ ಲಿಂಗ ಶಿವಗಂಗೆ  ಬೆಟ್ಟದಲ್ಲಿ, ರೇವಣ ಸಿದ್ದೇಶ್ವರ  ಬೆಟ್ಟದಲ್ಲಿ ಈಗಲೂ  ಇರುವುದನ್ನು  ಕಾಣಬಹುದು.  ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಈಗಲೂ ಸಿದ್ದರಾಮನ  ಹೆಸರಿನ ಊರುಗಳು, ದೇವಸ್ಥಾನಗಳು ಅಪಾರವಾಗಿರುವುದನ್ನು ಗಮನಿಸಿದರೆ ಅವನು ಈ ಪ್ರದೇಶದಲ್ಲಿ ಬಹಳ ಕಾಲ ಸುತ್ತಾಡಿರಬೇಕು ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ  ತುಮಕೂರು  ಜಿಲ್ಲೆಯಲ್ಲಿ       ಸಿದ್ಧರಾಮನ  ದೇವಸ್ಥಾನಗಳು  ಯಥೇಚ್ಛವಾಗಿದ್ದು, ಅವುಗಳ  ಪೂಜಾರಿಗಳು  ಕುರುಬರೇ  ಆಗಿರುವುದು ಕಂಡು  ಬರುತ್ತದೆ.  ಚಿಕ್ಕಮಗಳೂರು  ಜಿಲ್ಲೆಯ  ತರೀಕೆರೆ   ತಾಲೂಕು  ಅಜ್ಜಂಪುರದ  ಬಳಿಯ  ಸೊಲ್ಲಾಪುತದಲ್ಲಿ  ಹನ್ನೆರಡು ವರುಷಕ್ಕೊಮ್ಮೆ  ಜರುಗುವ ಜಾತ್ರೆಯಲ್ಲಿ  ಅದರ ವಿವಿಧ  ಆಚರಣೆಗಳಲಿ  ಕುರುಬರೇ ಭಾಗವಹಿಸಯತ್ತಾರೆಂದು ತಿಳಿದು ಬರುತ್ತದೆ.
ಅಂದರೆ ಕರ್ಮಯೋಗಿ  ಸಿದ್ಧರಾಮನು ಕಲ್ಯಾಣಕ್ಕೆ ಬಂದು  ಬಸವಣ್ಣ  ಚೆನ್ನಬಸವಣ್ಣ  ಅಲ್ಲಮಪ್ರಭು ಅವರ ಕಲ್ಪನಾಶಕ್ತಿ ಮತ್ತು  ಶಾಸ್ತ್ತ್ರವೇದ ಜ್ಞಾನ  ಮತ್ತು ಅಲೌಕಿಕಶಕ್ತಿಗಳಿಂದ ಮಹಾ ಶಿವಯೋಗಿ  ಎಂದು ಹೆಸರು ಪಡೆದನು ಆ ನಂತರ  ಅವನು  ವಿವಿಧೆಡೆಗಳಲ್ಲಿ  ಶಿವ ತತ್ವ  ಪ್ರಚಾರದಲ್ಲಿ ತೊಡಗಿ ದ್ದಾನೆ.  ಸಿದ್ಧ ರಾಮನು  ತನ್ನ ರಾಜರ್ಷಿ   ಮತ್ತು  ಬ್ರಹ್ಮರ್ಷಿ  ಗುಣ  ಸಾಮ ರ್ಥ್ಯಗಳಿಂದ  ಅತ್ಯಂತ ಜನಪ್ರಿಯನಾದ್ದರಿಂದ  ಅವನನ್ನು  ಜನರು  ಮಹಾದೇವನ  ಅವತಾರ ವೆಂದೇ ಪೂಜಿಸ ತೊಡಗಿದ್ದರು. ಸಿದ್ಧರಾಮ ನ ಸಾಧನೆ ಮತ್ತು ಸಂದೇಶ  ಕುರಿತು ವಿದ್ವಾಂಸ ವಿ. ಆರ್.  ಹನುಮಂತ ಯ್ಯನವರು ಕೆಳಕಂಡಂತೆ ಬರೆಯತ್ತಾರೆ.
ಸಿದ್ಧರಾಮ ಎಷ್ಟು ಪ್ರಭಾವಶಾಲಿ ಗೌರವಶಾಲಿ ವ್ಯಕ್ತಿತ್ವ  ಹೊಂದಿದ್ದನೆಂದರೆ ದೇವಗಿರಿ ಐಆದವರ ಶಾಸನದಲ್ಲಿ ಸಿದ್ಧರಾಮನ ಎರಡು ವಚನಗಳು ಕೆತ್ತನೆಗೊಂಡಿದೆ. ಅವನು ತಾನು ಕಟ್ಟಿಸಿದ  ಕೆರೆಯ ಅಂಗಳದಲ್ಲೇ  ಸಮಾಧಿಗೊಳ್ಳುವ ಮೊದಲು ಹಾವಿನಹಾಳ ಕಲ್ಲಯ್ಯ ಮೊದಲಾದ ಶಿಷ್ಯರಿಗೆ  ಈ ಕ್ಷೇತ್ರದ ಆಚರಣೆಗಳನ್ನು ಎಂದೂ ತಪ್ಪಿಸಬಾರದೆಂದೂ ಕುರುಬರ  ಕುಲದೆರೆಉಎಯಿಂದ ನಡೆಸಿಕೊಂಡು ಹೋಗಬೇಕೆಂದು  ಹೇಳಿ ಶಿವೈಕ್ಯರಾದರೆಂದು ತಿಳಿದು ಬರುತ್ತದೆ. ಹುಲಜಂತಿಯ ಮಹಾಲಿಂಗರಾಯರ ಮೊಮ್ಮಗನಾದ ಬರಹಗಾಲ ಸಿದ್ದನು ಸಿದ್ಧರಾಮನನ್ನು  ಕಂಡು ಕೆರೆಯಲ್ಲಿ  ಜಲದ  ಕಣ್ಣು  ( ನೀರಿನ ಸೆಲೆ) ಇರುವ ಮಹಿಮಾಪುರುಷ ಸೂಚಿಸಿದನೆಂದು  ಸಂತೋಷಗೊಂಡು  ಅವನ ಸ್ಮರಣಾಐರ್ವಾಗಿ ವರುಷಕ್ಕೊಮ್ಮೆ ಅಲ್ಲಿ  ಜಾತ್ರೆಯ ಕಾಲದಲ್ಲಿ  ಸಾಧು  ಸತ್ಪುರುಷರಿಗೆ  ಸಾವಿರ ಕೌಪೀನ ಕಂಬಳಿಗಳನ್ನು ದಾನ ಮಾಡುವ  ಪದ್ದತಿಯನ್ನು ಜಾರಿಗೆ ತಂದನೆಂದು ತಿಳಿದು ಬರುತ್ತದೆ.
ಜಲಶಾಸ್ತ್ತ್ರಜ್ಞಾನ ಸಾಮಾಜಿಕ ಅಭಿವೃದ್ದಿ ಕಾರ್ಯಗಳ  ಪರಿಕಲ್ಪನೆ  ಎಲ್ಲವೂ ಕೃಷಿಕ ಮೂಲದ ನಾಯಕತ್ವ  ಗುಣಗಳುಳ್ಳ  ವ್ಯಕ್ತಿಗೆ ಮಾತ್ರವೇ  ಸಾಧ್ಯ  ಕುಲದೇರಿಗೆ ಎಂದರೆ ಕುಲಸ್ಥರ ಮೇಲೆ ಆಯಾಮ ಕುಲದ ಯಜಮಾನರು ವಿಧಿಸುವ ತೆರಿಗೆ  ಇದು ಕುರುಬ  ಜನಾಂಗದಲ್ಲಿಮಾತ್ರವೇ  ಅಸ್ತಿತ್ವದಲ್ಲಿದೆ.  ಒಕ್ಕಲಿಗರಲ್ಲಿ ಕುಲ  ಪರಿಕಲ್ಪನೆಯೇ  ಇಲ್ಲ. ಆದ್ದರಿಂದ  ಸಿದ್ದರಾಮನು  ಕುಡು  ಒಕ್ಕಲಿಗನಲ್ಲ ಬದಲಾಗಿ  ಒಕ್ಕಲುತನವಿದ್ದ ಅಂದರೆ ಕೃಷಿ ಭೂಮಿಯಿದ್ದ ಸಿದ್ದಪಂಗಡಕ್ಕೆ ಸೇರಿದ  ಕುರುಬ  ಜನಾಂಗದವನು  ಎನ್ನುವುದು ಸ್ಪಷ್ಟವಾಗುತ್ತದೆ.
ಒಮ್ಮೆ ಕಲ್ಯಾಣ  ಪಟ್ಟಣದಲ್ಲಿ ದೇವಸ್ಥಾನದ  ಹಾಲಗರವಿಯಲ್ಲಿ  ಕುರುಬರು  ಮಾಂಸ ತಂದು ಮಾರುವುದರಿಂದ ಅಲ್ಲೆಲ್ಲಾ ಆಶುದ್ದಿಯಾಗುತ್ತದೆ. ಎಂದು ಉಳಿದ ಸಕಲ 18 ಜಾತಿಯವರು ದೊರೆ ಬಿಜ್ಜಳನಿಗೆ  ದೂರು ಕೊಡುತ್ತಾರೆ. ಆಗ ಅವರೆಲ್ಲರನ್ನೂ ಖುಷಿಮಡಿಸಲು ಕುರುಬರು ಕಲ್ಯಾಣ  ಪಟ್ಟಣವನ್ನು ಪ್ರವೇಶಿಸಕೂಡದೆಂದು ಬಿಜ್ಜಳ ಪ್ರತಿಬಂಧಕಾಜ್ಞೆ (ಬಹಿಷ್ಕಾರ) ವಿಧಿಸುತ್ತಾನೆ. ಈ ಸಮಸ್ಯೆಯಿಂದ ಧೃತಿಗೆಟ್ಟ ಮುಗ್ಧ ಕುರುಬರು  ಸಿದ್ಧರಾಮನ  ಸಿದ್ದೇಶ್ವರ  ಮತ್ತು ಅಲ್ಲಮ ಪ್ರಭು  ನ್ಯಾಯಬಿಡಿಸಲು ಕಲ್ಯಾಣಕ್ಕೆ  ಸಮೀಪವಿದ್ದ ಸರೂರಿನ ತೂಗುಡ್ಡಕ್ಕೆ  ಬರುವಂತೆ  ಮಾಡುತ್ತಾನೆ.  ಹೀಗೆ ಕಲ್ಯಾಣಕ್ಕೆ ಮಹಾಶೈವತ್ರಯರಿಗೆ ಸಿದ್ಧರಾಮ, ರೇವಣ ಸಿದ್ಧ ಮತ್ತು ಅಲ್ಲಮ  ಪ್ರಭುವಿಗೆ  ಬಸವಣ್ಣನವರು ಗಣಾರಾಧನೆ ಮಾಡಿಸಿ ಗೌರವ ಸೂಚಿಸುವರು.
ಮುಂದೆ ಈ ವಿಷಯ  ಬಹಿರಂಗವಾಗಿ ಚರ್ಚೆಯಾಗಿ ಕೊನೆಗೆ ಕುರುಬರ  ಸಚ್ಚಾರಿತ್ರ ಮತ್ತು ಶೀಲವಂತಿಕೆಗೆ ಮೆಚ್ಚಿ  ಏವನ ಸಿದ್ದೇಶ್ವರ   ತಪಃಶಕ್ತಿಗೆ  ಬೆಚ್ಚಿ  ಬಿಜ್ಜಳನು ಕುರುವ  ಜನಾಂಗದ  ಮೇಲೆ ವಿಧಿಸಿದ್ದ ಬಹುಷ್ಕಾರವನ್ನು  ರದ್ದು  ಪಡಿಸಿದನೆಂದೂ  ತಿಳಿದು ಬರುತ್ತದೆ.  ಇಂದಿಗೂ  ಶಿವರಾತ್ರಿಯಂದು  ಸೊಲ್ಲಾಪುರದ ಸಿದ್ದರಾಮನ ದೇವಸ್ಥಾನದಲ್ಲಿ  ಜರುಗುವ  ಜಾತ್ರೆಯ ಸಂದರ್ಭದಲ್ಲಿ ಕುರುಬರ (ಧನಗಾರರು) ಹಬ್ಬು ಎಂಬ ವ್ಯಕ್ತಿ ತಲೆಯ ಮೇಲೆ  ಗೊಂಗಡಿ (ಕಂಬಳಿ)  ಹಾಕಿಕೊಂಡು ಪೂಜಾಕಾರ್ಯಕ್ಕೆ ನಾಂದಿ  ಹಾಡುತ್ತಾನೆ ಎಂದು  ತಿಳಿದು  ಬರುತ್ತದೆ.  ಆದರೆ ಇತ್ತೀಚೆಗೆ   ಬಣಜಿಗ ಲಿಂಗಾಯಿತರು ಆ ಮನೆತನದ  ಜೊತೆ  ವೈವಾಹಿಕ ಸಂಬಂಧ ಬೆಳೆಸಿದ್ದಾರೆ. ಎಂದು  ಪ್ರತೀತಿ ಎಂಬುದಾಗಿ  ವಿ. ಆರ್. ಹನಯಮಂತಯ್ಯ ತಮ್ಮ ಕುರುಬರ  ಚರಿತ್ರೆ  ಗ್ರಂಥದಲ್ಲಿ ಬರೆದಿದ್ದಾರೆ.
ಸುಡ್ಡಳ  ಚಾಚರಸನೆಂಬ  ವಚನಕಾರನು  ಸಿದ್ಧರಾಮನ ಬಗೆಗೆ ಹೀಗೆ  ಹೇಳಿದ್ದಾನೆ.
ಉಂಡುಂಡು  ಜರೆವವನು ಯೋಗಿಯೇ
     ಆತನಕ್ಕಳುವವನು ಯೋಗಿಯೇ
     ವ್ಯಸನಕ್ಕೆ  ಮರುಗುವವನು ಯೋಗಿಯೇ
     ಆದಿವ್ಯಾಧಿಯುಳ್ಳವ ಯೋಗಿಯೆ
  ಯೋಗಿಗಳೆಂದರೆ ಮೂಗನಾಗಳ ಕೊಯ್ದೆ
     ಯೋಗಿಗಳೆಂದರೆ  ಮೂಗನಾಗಳ ಕೋಯ್ದೆ
     ಯೋಗಿಗಳ  ಯೋಗಿ ಶಿವಯೋಗಿ
     ಸಿದ್ಧರಾಮನೊಬ್ಬನೆ  ಯೋಗಿ  
ದುಗ್ಗಳೆ  ಎಂಬ ಶರಣೆಯು ಯೋಗಿಯಾದಡೆ ಸಿದ್ಧರಾಮಯ್ಯ ನಂತಾಗಬೇಕು ಎಂದು ಅಭಿಮಾನಪೂರ್ವಕವಾಗಿ ನುಡಿದ್ದ್ದಾಳೆ.
ಸಿದ್ದರಾಮನು ತನ್ನ ಸ್ವಂತ ಗಳಿಕೆಯಿಂದ ಬಡವರ ಸಾಲಗಳನ್ನು  ತೀರಿಸುತ್ತಾನೆ. ಈ ಕೆಲಸವನ್ನು ಇಂದು ಆಧುನಿಕ ಸರ್ಕಾರಗಳು  ಮಾಡುತ್ತಿರುವುದನ್ನು  ನಾವು  ಋುಣ  ಪರಿಹಾರವೆನ್ನುತ್ತೇವೆ. ಅಂದು ಸಿದ್ಧರಾಮರು  ತಾನೇ  ಸರ್ಕಾರ  (ಪ್ರಭುತ್ವ)  ಮಾಡಬೇಕಾದ  ಸಾಮಾಜಿಕ  ಕೆಲಸ  ಕಾರ್ಯಗಳನ್ನು  ಮಾಡುತ್ತಿದ್ದನು.  ಬಡವರಿಗಾಗಿ  ಕರ್ಮಯೋಗಿ ಸಿದ್ದರಾಮನು   ಹಗಲಿರುಳೆನ್ನದೆ ದುಡಿದಿದ್ದನು ಈ ಬಡವರು ಕಷ್ಟಪಡುವುದನ್ನು  ಕಂಡು ಪ್ರಗತಿಪರ  ಚಿಂತನೆಯುಳ್ಳ ಮತ್ತು  ಅಪಾರಾದ  ಮುನ್ನೌಟವಿದ್ದ  ಸಿದ್ದರಾಮನು  ಸಾಮೂಹಿಕ ವಿವಾಹಗಳ  ಕಾರ್ಯಕ್ರಮವನ್ನು  ಜಾರಿಗೆ  ತರುವನು.  ಈಗ ಸಿದ್ಧರಾಮನ ಪರಿಕಲ್ಪನೆಯು  ಜನಾನುರಾಗಿಯಾಗಿದೆ. ಪ್ರಸ್ತುತ  ಮಠಗಳು  ದೇವಸ್ಥಾನಗಳು, ಸ್ವಯಂ ಸೇವಾ  ಸಂಘಗಳು  ಉಚಿತ ಸಾಮೂಹಿಕ ವಿವಾಹ  ಸಮಾರಂಭಗಳನ್ನು  ಏರ್ಪಡಿಸುತ್ತಿವೆ. ಇದೇ ಕೆಲಸವನ್ನು ಸುಮಾರು  ಎಂಟುನೂರು ವರ್ಷಗಳ  ಹಿಂದೆ ಸಿದ್ದರಾಮನು ಮಾಡಿದ್ದನು.
ಸಿದ್ದರಾಮನ ವ್ಯಕ್ತಿತ್ವವು ಎಲ್ಲಾ  ಜನರಿಗೆ ಮಾದರಿಯಾಗಿದೆ.  ಆದರ್ಶ ಪ್ರಾಯವಾಗಿದೆ. ಹಿಂದುಳಿದ ವರ್ಗಗಳ  ಕುರುಬರೂ ಸೇರಿದಂತೆ  ರಾಜಕೀಯ ನಾಉಕರಿಗೆ ಮತ್ತು ಸ್ವಯಂ ಸೇವಾ ಸಂಘಗಳ  ಪದಾಧಿಕಾರಿಗಳಿಗೆ  ಸಿದ್ಧರಾಮನು  ಮತ್ತು ಆತನ ಸಮಾಜಮುಖಿ ವ್ಯಕ್ತಿತ್ವವು   ಆದರ್ಶಪ್ರಾಯವಾಗಿದೆ. ಸಂಆಜದ  ಎಲ್ಲಾ ವರ್ಗಗಳ  ಜನರು ಸಿದ್ಧರಾಮನ  ಜೀವನ  ವಿವರಗಳನ್ನು  ತಿಳಿಯುವು ದರಿಂದ, ಆತನ ವಚನಗಳನ್ನು ಅಧ್ಯಯನ  ಮಾಡುವುದರಿಂದ ಅವರಿಗೆ ಅಪಾರವಾದ, ಪ್ರಯೋಜನವಿದೆ.  ವೀರಶೈವ  ಸಮಾಜವು ಸಿದ್ಧ ಆಗಮನನ್ನು  ಗುರುಸ್ಥಾನದಲ್ಲಿಟ್ಟು  ಪೂಜಿಸುತ್ತಿದೆ. ಅದು  ಸಿದ್ದರಾಮನನ್ನು ಆರಾಧನಾಭಾವದಿಂದ ಕಂಡು ಗೌರವಿಸುತ್ತಿರುವುದು ಕುರುಬರಿಗೆ  ಮತ್ತು  ಇತರರಿಗೆ ಅನುಕರಣೀಯವಾಗಿದೆ.
ಹಾಲುಮತ ಕುರುಬ ಜನಾಂಗವು  ಶೈವ ಪಂಥಕ್ಕೆ ಜನ್ಮ  ನೀಡಿದ ಜನ ವರ್ಗವಾಗಿದೆ. ಇದು ಹಾಲುಮತ ಸಂಸ್ಕ್ಕತಿಯನ್ವಯ  ಹಿಂದೂ  ಧರ್ಮದ ಮತ್ತು ಸಮಾಜದ  ಮಹತ್ವವನ್ನು  ಹಾಗೂ ಅವುಗಳ  ಸಾಂಸ್ಕ್ಕತಿಕ  ಮೌಲ್ಯವನ್ನು  ಶ್ರೀಮಂತಗೊಳಿಸಿದೆಯೇ ಹೊರತು  ಕೆಲವರು  ಹೇಳುವಂತೆ  ತಳವರ್ಗ  ಕೆಳವರ್ಗ ವಾಗಿಲ್ಲ.  ಕುರುಬ ಸಮಾಜವು ಧಾರ್ಮಿಕವಾಗಿ ಶೈವ ಮೂಲ ಪಂಥಧ  ಜನಾಂಗ ವಾಗಿದೆ.  ರಾಜಕೀಯವಾಗಿ ಕ್ಷತ್ರಿಯ ಜನಾಂಗವಾಗಿದೆ. ಆದ್ದರಿಂದ  ಹಾಲುಮಂತ   ಕುರುಬಜನಾಂಗದವರು  ತಮ್ಮ ಕೀಳರಿಮೆಯನ್ನು ತೊರೆದು  ಶಿವಯೋಗಿ  ಸಿದ್ಧರಾಮನ  ಜೀವನ  ದರ್ಶನವನ್ನು ಸಂಪನ್ನಗೊಳಿಸಿಕೊಳ್ಳುವುದು ಯೋಗ್ಯವಾದ  ವಿಚಾರವಾಗಿದೆ

Article from - http://kannadamma.net/?p=29644

No comments:

Post a Comment